ಪರಿಶಿಷ್ಟ ಜಾತಿ/ಪಂಗಡದವರಿಗೆ ವೃತ್ತಿಪರ ಕೌಶಲ್ಯಾಭಿವೃದ್ಧಿ ತರಬೇತಿ
ಉಡುಪಿ, ಎ.26: ಮೈಸೂರಿನಲ್ಲಿರುವ ಕರ್ನಾಟಕದ ಏಕೈಕ ಕೇಂದ್ರೀಯ ಪ್ಲಾಸ್ಟಿಕ್ ಇಂಜಿನಿಯರಿಂಗ್ ಮತ್ತು ತಂತ್ರಜ್ಞಾನ ಸಂಸ್ಥೆಯಲ್ಲಿ 2019-20ನೇ ಸಾಲಿನ ಜಿಲ್ಲೆಯ ಪರಿಶಿಷ್ಟ ಜಾತಿ/ ಪರಿಶಿಷ್ಟ ಪಂಗಡಗಳಿಗೆ ಸೇರಿದ ನಿರುದ್ಯೋಗಿ ಯುವಕ/ ಯುವತಿಯರಿಗೆ ಉಚಿತ ಊಟ, ವಸತಿ ಹಾಗೂ ಮಾಸಿಕ 500 ರೂ. ಶಿಷ್ಯ ವೇತನದೊಂದಿಗೆ ತರಬೇತಿ ನೀಡಿದ ನಂತರ ಉದ್ಯೋಗಾವಕಾಶ ಕಲ್ಪಿಸಿಕೊಡಲಾಗುತ್ತದೆ.
ತರಬೇತಿ ಅವಧಿ ಆರು ತಿಂಗಳಾಗಿದ್ದು, ತರಬೇತಿಗೆ ಎಸೆಸೆಲ್ಸಿ, ಪಿಯುಸಿ, ಐಟಿಐ, ಡಿಪ್ಲೋಮ ಅಥವಾ ಪದವಿ ಪಡೆದ ಅ್ಯರ್ಥಿಗಳು ಅರ್ಹರಾಗಿ ರುವರು. ನೇರ ಆಯ್ಕೆಗೆ ಮೇ 3ರೊಳಗೆ ಮೂಲ ದಾಖಲಾತಿಗಳಾದ ಎಸೆಸೆಲ್ಸಿ, ಪಿಯುಸಿ, ಐಟಿಐ, ಡಿಗ್ರಿಯ ಮಾರ್ಕ್ಸ್ ಕಾರ್ಡ್, ಜಾತಿ ಹಾಗೂ ಆದಾಯ ಪ್ರಮಾಣ ಪತ್ರ, ಆಧಾರ್ ಕಾರ್ಡ್ ಹಾಗೂ 5 ಪಾಸ್ಪೋರ್ಟ್ ಫೋಟೊ ದೊಂದಿಗೆ 18ರಿಂದ 35ವರ್ಷದೊಳಗಿನ ಅ್ಯರ್ಥಿಗಳು ಸಿಐಪಿಇಟಿ, ಹೆಬ್ಬಾಳ್ ಇಂಡಸ್ಟ್ರೀಯಲ್ ಏರಿಯಾ, ಮೈಸೂರು ಇಲ್ಲಿಗೆ ಸೇರ್ಪಡೆಗೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ: 0821-2510618, 2511903, ಮೊ.ನಂ:9632688884/ 9480253024ನ್ನು ಸಂಪರ್ಕಿಸುವಂತೆ ಸಿಪೆಟ್ನ ಪ್ರಕಟಣೆ ತಿಳಿಸಿದೆ.