ಉಡುಪಿಯ ಹಿರಿಯ ಕಾಂಗ್ರೆಸ್ ಮುಖಂಡ ಎ.ಜೆ.ಕಾಡಬೆಟ್ಟು ನಿಧನ
ಉಡುಪಿ, ಎ.26: ಉಡುಪಿಯ ಹಿರಿಯ ಕಾಂಗ್ರೆಸ್ ಮುಖಂಡ ಎ.ಜೆ.ಕಾಡಬೆಟ್ಟು ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಸಂಜೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ಅವರಿಗೆ 79 ವರ್ಷ ಪ್ರಾಯವಾಗಿತ್ತು.
ಮಲ್ಪೆ ಮಧ್ವರಾಜರ ನಿಕಟವರ್ತಿಯಾಗಿದ್ದ ಕಾಡಬೆಟ್ಟು, ಆದರ್ಶ್ ಫ್ರೆಂಡ್ಸ್ ಅಸೋಸಿಯೇಷನ್ ಎಂಬ ಸಂಘಟನೆಯನ್ನು ಕಟ್ಟಿಕೊಂಡು ಕಳೆದ 50 ವರ್ಷಗಳಿಂದ ನಗರದಲ್ಲಿ ವಿವಿಧ ಕ್ರೀಡಾಚಟುವಟಿಕೆಗಳನ್ನು ನಡೆಸಿಕೊಂಡು ಬರುತಿದ್ದರು. ಹತ್ತಾರು ಕ್ರೀಡಾಪಟುಗಳು ಇವರ ಗರಡಿಯಲ್ಲಿ ಬೆಳಕಿಗೆ ಬಂದಿದ್ದು, ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ಮಿಂಚಿದ್ದರು.
ನಗರದಲ್ಲಿ ಉತ್ತಮ ಹುಲಿವೇಷಧಾರಿಯಾಗಿಯೂ ಇವರು ಗುರುತಿಸಿ ಕೊಂಡಿದ್ದರು.ವಿವಿಧ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದ ಇವರು, ಕಾಂಗ್ರೆಸ್ನಲ್ಲಿ ಸಾಮಾನ್ಯ ಕಾರ್ಯಕರ್ತರಾಗಿಯೇ ಗುರುತಿಸಿಕೊಳ್ಳುತಿದ್ದರು. ಕಾಡಬೆಟ್ಟು ಪತ್ನಿ ಹಾಗೂ ಮಕ್ಕಳನ್ನು ಅಗಲಿದ್ದಾರೆ.
Next Story