ಹಿರಿಯ ನಾಗರಿಕರಿಗೆ ಸೂಚನೆ ಹಿರಿಯ ನಾಗರಿಕರಿಗೆ ಸೂಚನೆ
ಉಡುಪಿ, ಎ.27: ಸರಕಾರದ ಆದೇಶದಂತೆ 2019ರ ಜ.1ಕ್ಕೆ 80 ವರ್ಷ ಪೂರ್ತಿಗೊಳಿಸಿದವರಿಗೆ ಮೂಲ ನಿವೃತ್ತಿ ವೇತನವನ್ನು ಶೇ.20ರಷ್ಟು ಈ ವರ್ಷದ ಜ.1ರಿಂದ ಅನ್ವಯವಾಗುವಂತೆ ಹೆಚ್ಚಿಸಿ ನಿವೃತ್ತಿ ವೇತನ ಪಾವತಿ ಮಾಡುವ ಬ್ಯಾಂಕುಗಳು ನಿಗದಿಗೊಳಿಸಿದ್ದು, ಅದಕ್ಕೆ ಲಭ್ಯವಾಗುವ ತುಟ್ಟಿಭತ್ಯೆಯೊಂದಿಗೆ ಖಾತೆಗೆ ಜಮೆಮಾಡಲಾಗುತ್ತಿದೆ.
ಈ ಸೌಲಭ್ಯಕ್ಕಾಗಿ ಹಿರಿಯ ನಿವೃತ್ತರು ತಾವು ನಿವೃತ್ತಿ ವೇತನ ಪಡೆಯುವ ಬ್ಯಾಂಕಿನ ಶಾಖೆಗೆ ಅರ್ಜಿ ಸಲ್ಲಿಸಬೇಕಾಗಿಲ್ಲ. ತಮ್ಮ ಖಾತೆಯ ಪುಸ್ತಕ ಪರಿಶೀಲಿಸಿ ಮೊತ್ತ ಜಮೆಯಾಗದಿದ್ದಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು ಎಂದು ನಿವೃತ್ತ ನೌಕರರ ಉಡುಪಿ ಜಿಲ್ಲಾ ಸಂಘದ ಕಾರ್ಯದರ್ಶಿ ಎಸ್. ಎಸ್. ತೋನ್ಸೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story