ಮನೆಗೆ ನುಗ್ಗಿ ಚಿನ್ನಾಭರಣ ಕಳವು
ಬ್ರಹ್ಮಾವರ, ಎ.28: ಚಾಂತಾರು ಗ್ರಾಮದ ಹೇರಿಂಜೆ ರಸ್ತೆಯ ಲಿಟ್ಲ್ರಾಕ್ ಶಾಲೆಯ ವಸತಿ ಗೃಹದ ಬಳಿಯ ಮನೆಯೊಂದಕ್ಕೆ ಎ.28ರಂದು ಮಧ್ಯಾಹ್ನ ವೇಳೆ ನುಗ್ಗಿದ ಕಳ್ಳರು ಕಳವು ಮಾಡಿರುವ ಬಗ್ಗೆ ವರದಿಯಾಗಿದೆ.
ರಜಿ ಜಾಕಾಬ್ ಎಂಬವರ ಮನೆಯ ಬಾಗಿಲಿನ ಬೀಗವನ್ನು ಮುರಿದು ಒಳನುಗ್ಗಿದ ಕಳ್ಳರು ಕಪಾಟನ್ನು ಒಡೆದು ಅದರಲ್ಲಿದ್ದ ಒಟ್ಟು 13ಪವನ್ ತೂಕದ 2 ಲಕ್ಷ ಮೌಲ್ಯದ ಚಿನ್ನದ ಸರ, ಚಿನ್ನದ ನೆಕ್ಲೆಸ್, 2 ಉಂಗುರ, 4 ಚಿನ್ನದ ಬಳೆ, 2 ಚಿನ್ನದ ಚೈನ್, 2 ಚಿನ್ನದ ನಾಣ್ಯಗಳನ್ನು ಕಳವು ಮಾಡಿರುವುದಾಗಿ ದೂರ ಲಾಗಿದೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story