ನಿರ್ಮಯ್ ವೈ.ಎನ್.ಗೆ ಚಿನ್ನದ ಪದಕ
ಮಂಗಳೂರು, ಎ. 29: ಉತ್ತರ ಪ್ರದೇಶದ ಗ್ರೇಟರ್ ನೋಯ್ಡದಲ್ಲಿ ಇತ್ತೀಚೆಗೆ ನಡೆದ ರಾಷ್ಟ್ರೀಯ ಮಟ್ಟದ ರೋಲರ್ ಸ್ಕೇಟಿಂಗ್ ಚಾಂಪಿಯನ್ ಶಿಪ್ 2019ರಲ್ಲಿ ಮಂಗಳೂರಿನ ಸ್ಕೇಟಿಂಗ್ ಪಟು ನಿರ್ಮಯ್ ವೈ.ಎನ್. ಒಂದು ಚಿನ್ನದ ಪದಕ ಪಡೆದಿದ್ದಾರೆ. ಇವರು 9ರಿಂದ 11 ವರ್ಷ ವಿಭಾಗದ 500 ಮೀ ರೋಡ್ರೇಸ್ನಲ್ಲಿ ಚಿನ್ನದ ಪದಕ ಪಡೆದಿದ್ದಾರೆ.
ನಗರದ ಉರ್ವ ಹೊಯ್ಗೆಬೈಲು ನಿವಾಸಿಯಾದ ಯದುನಂದನ ಮತ್ತು ವಿಜಯಲಕ್ಷ್ಮಿ ದಂಪತಿಯ ಪುತ್ರನಾಗಿರುವ ನಿರ್ಮಯ್ ವೈ.ಎನ್ (9 ವರ್ಷ) ಡೊಂಗರಿಕೇರಿಯ ಕೆನರಾ ಆಂಗ್ಲ ಮಾಧ್ಯಮ ಶಾಲೆಯ ನಾಲ್ಕನೇ ತರಗತಿಯ ವಿದ್ಯಾರ್ಥಿ. ಹೊಯ್ಗೆಬೈಲುವಿನ ಹೈಫ್ಲೈಯರ್ಸ್ ಸ್ಕೇಟಿಂಗ್ ಕ್ಲಬ್ ತರಬೇತಿದಾರ ಜಯರಾಜ್ ಹಾಗೂ ಮೋಹನ್ ಕೆ. ಅವರಿಂದ ತರಬೇತಿ ಪಡೆದಿದ್ದಾರೆ.
Next Story