ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ಮಳಿಗೆಯಲ್ಲಿ ‘ಚಿನ್ನ ಖರೀದಿಗೆ ಬೆಳ್ಳಿ ಉಚಿತ’ ವಿಶೇಷ ಕೊಡುಗೆ
ಮಂಗಳೂರು, ಎ. 29: ಮಲಬಾರ್ ಚಿನ್ನ ಮತ್ತು ವಜ್ರಾಭರಣ ಮಳಿಗೆಯಲ್ಲಿ ಚಿನ್ನದ ಆಭರಣ ಖರೀದಿಗೆ ಸಮ ಪ್ರಮಾಣದ ಬೆಳ್ಳಿಯ ಆಭರಣವನ್ನು ಗ್ರಾಹಕರು ಉಚಿತವಾಗಿ ಪಡೆಯಲು ಅವಕಾಶ ನೀಡುವ ಹಬ್ಬದ ವಿಶೇಷ ಕೊಡುಗೆ ಮೇ 6ರೊಳಗೆ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ದೊರೆಯಲಿದೆ.
ಚಿನ್ನಾಭರಣ ಖರೀದಿಯಲ್ಲೂ ಶೇ 50 ಮೇಕಿಂಗ್ ಚಾರ್ಜ್ನಲ್ಲಿ ಕಡಿತ ಹಾಗೂ ವಜ್ರಾಭರಣದ ಮೌಲ್ಯದಲ್ಲಿ ಕಡಿತ ಮೇ7ರೊಳಗೆ ಬುಕ್ಕಿಂಗ್ ಮಾಡುವ ಗ್ರಾಹಕರಿಗೆ ಮತ್ತು ಮುಂಗಡ ನೀಡುವ ಗ್ರಾಹಕರಿಗೆ ರಿಯಾಯಿತಿ ದೊರೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಪ್ರಪಂಚದ 10 ದೇಶಗಳಲ್ಲಿ 250 ಚಿನ್ನ ಮತ್ತು ವಜ್ರಾಭರಣ ಮಳಿಗೆಗಳನ್ನು ಹೊಂದಿರುವ ಮಲಬಾರ್ ಗೋಲ್ಡ್ ಆ್ಯಂಡ್ ಡೈಮಂಡ್ ವಿವಿಧ ವಿನ್ಯಾಸದ ಆಕರ್ಷಕ ಹಾಗೂ ಪಾರಂಪರಿಕ ವಿಶಿಷ್ಟ ವಜ್ರಾಭರಣಗಳ ಮಳಿಗೆಗಳನ್ನು ಹೊಂದಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.
Next Story