ವಿಟ್ಲ: ಹೃದಯಾಘಾತದಿಂದ ನವವಿವಾಹಿತ ನಿಧನ
ವಿಟ್ಲ, ಎ. 30: ನವವಿವಾಹಿತ, ಒಕ್ಕೆತ್ತೂರು ಉಮರ್ (ಲಕ್ಸುರಿ ಮೋನುಚ್ಚ) ಅವರ ಪುತ್ರ ನಿಝಾಮ್ (30) ಅವರು ಸೋಮವಾರ ರಾತ್ರಿ ಮನೆಯಲ್ಲಿ ಮಲಗಿದ್ದವರು ಮಂಗಳವಾರ ಬೆಳಗ್ಗೆ ಎಚ್ಚರಿಸುವಾಗ ಮೃತಪಟ್ಟಿದ್ದು, ಹೃದಯಾಘಾತದಿಂದ ನಿಧನರಾಗಿದ್ದಾರೆಂದು ಕುಟುಂಬ ಮೂಲಗಳು ತಿಳಿಸಿವೆ.
ಸೌದಿ ಅರೇಬಿಯಾದಲ್ಲಿ ಉದ್ಯೋಗಕ್ಕೆ ತೆರಳಿದ್ದ ನಿಝಾಮ್ ಕಳೆದ 3 ತಿಂಗಳ ಹಿಂದೆ ಊರಿಗೆ ಬಂದಿದ್ದರು. ಒಂದು ತಿಂಗಳ ಹಿಂದೆಯಷ್ಟೇ ಪೆರ್ಲ ಮೂಲದ ಯುವತಿಯನ್ನು ವಿವಾಹವಾಗಿದ್ದರು.
ಎದೆನೋವು ಎಂದು ತಡರಾತ್ರಿ ಎದ್ದು ಔಷಧಿ, ನೀರು ಕುಡಿದು ಮತ್ತೆ ಮಲಗಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story