ಅಂಗಡಿಮುಗರು ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಹಮೀದ್ ಅಲಿ ನಿಧನ
ಮಂಜೇಶ್ವರ: ಪೆರ್ಲ ನಿವಾಸಿ, ಅಂಗಡಿಮುಗರು ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾಗಿದ್ದ ಹಮೀದ್ ಅಲಿ (53) ಅವರು ಹೃದಯಾಘಾತದಿಂದ ಸೋಮವಾರ ರಾತ್ರಿ ನಿಧನರಾಗಿದ್ದಾರೆ.
ಮೃತರು ಪತ್ನಿ, ಮೂವರು ಪುತ್ರರು, ಇಬ್ಬರು ಪುತ್ರಿಯರು ಹಾಗು ಅಪಾರ ಬಂಧುಬಳಗವನ್ನು ಅಗಲಿದ್ದಾರೆ.
ಹಮೀದ್ ಅಲಿ ಅವರ ಸೇವೆಯನ್ನು ಗುರುತಿಸಿದ ಎಸ್ಸೆಸ್ಸೆಫ್, ಎಸ್ಐಒ ಹಾಗು ಇತರ ಸಂಘಸಂಸ್ಥೆಗಳು ಎಜುಕೇಶನ್ ಆ್ಯಂಡ್ ಎಕ್ಸಲೆನ್ಸಿ ಅವಾರ್ಡ್ ನೀಡಿ ಗೌರವಿಸಿವೆ.
ಹಮೀದ್ ಅಲಿ ಅವರ ಅಂತಿಮ ಸಂಸ್ಕಾರವು ಇಂದು ಮಧ್ಯಾಹ್ನ ಪೆರ್ಲ ಮಸೀದಿ ವಠಾರದಲ್ಲಿ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
Next Story