ವಿಶ್ವಮಂಗಳ ವಿದ್ಯಾಸಂಸ್ಥೆಗೆ ಶೇ 100 ಫಲಿತಾಂಶ
ಕೊಣಾಜೆ: ಕೊಣಾಜೆಯ ವಿಶ್ವಮಂಗಳ ಆಂಗ್ಲಮಾಧ್ಯಮ ಶಾಲೆಗೆ ಈ ಭಾರಿಯ ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹಾಜರಾದ ಎಲ್ಲಾ ವಿದ್ಯಾರ್ಥಿಗಳು ಉತ್ತೀರ್ಣರಾಗುವುದರೊಂದಿಗೆ ಶೇ 100 ಫಲಿತಾಂಶ ಲಭಿಸಿದೆ.
ಪರೀಕ್ಷೆಗೆ 52 ವಿದ್ಯಾರ್ಥಿಗಳು ಹಾಜರಾಗಿದ್ದು, 12 ವಿದ್ಯಾರ್ಥಿಗಳು ಎ.ಪ್ಲಸ್ ಗ್ರೇಡ್ನೊಂದಿಗೆ ಉತ್ತೀರ್ಣರಾಗಿದ್ದಾರೆ. ವಿದ್ಯಾಸಂಸ್ಥೆಯ ಆದ್ಯ ಎಂ 610 ಅಂಕ ಪಡೆಯುವುದರೊಂದಿಗೆ ಟಾಪರ್ ಆಗಿ ಹೊರಹೊಮ್ಮಿದ್ದಾರೆ. ಶಲ್ಮಾ ಯು.ಎಸ್.600, ಮನೀಷ್ ಎಂ ಕುಲಾಲ್ 593, ಅಜಿತ್ ನಾರಾಯಣ 584, ಜಮೀಲ 577, ಮಹಮ್ಮದ್ ಅತೀಕ್ 570, ಶರಣ್ಯ 570, ಹರಿಕೇಶ್ 569, ಸಾಧನ ಎಸ್.ಪಿ. ಗಟ್ಟಿ 567, ಕೃಷ್ಣ ಚೇತನ ಶೆಟ್ಟಿ 563, ದೆಲೀಶ ಅಪೋಸ್ 562 ಅಂಕಗಳನ್ನು ಪಡೆದು ಸಾಧನೆ ಮಾಡಿದ್ದಾರೆ.
Next Story