ಅಲೆವೂರಿನ ಅಂಕಿತಾ ಆಚಾರ್ಯಗೆ 621 ಅಂಕ
ಉಡುಪಿ, ಎ.30: ಎಸೆಸೆಲ್ಸಿ ಪರೀಕ್ಷೆಯಲ್ಲಿ ಅಲೆವೂರು ಶಾಂತಿನಿಕೇತನಾ ಆಂಗ್ಲ ಮಾಧ್ಯಮ ಪ್ರೌಢಶಾಲೆಯ ವಿದ್ಯಾರ್ಥಿನಿ ಅಂಕಿತಾ ಪಿ.ಆಚಾರ್ಯ 621 ಅಂಕ ಗಳಿಸಿದ್ದಾರೆ.
ಸಂಸ್ಕೃತ 125, ಕನ್ನಡ 100, ಇಂಗ್ಲಿಷ್ 100, ಗಣಿತ 100, ವಿಜ್ಞಾನ 98, ಸಮಾಜ 98 ಅಂಕ ಪಡೆದಿರುವ ಇವರು, ಅಲೆವೂರಿನ ನಿವಾಸಿ ಪ್ರಭಾಕರ ಆಚಾರ್ಯ ಹಾಗೂ ವಿಜಯಶ್ರೀ ಆಚಾರ್ಯ ದಂಪತಿಯ ಪುತ್ರಿ.
‘ನೀರಿಕ್ಷೆಗಿಂತ ಹೆಚ್ಚಿನ ಅಂಕ ಬಂದಿದೆ. ತುಂಬಾ ಖುಷಿಯಾಗಿದೆ. ತಂದೆ, ತಾಯಿ, ಶಾಲೆಯ ಶಿಕ್ಷಕರು, ಆಡಳಿತ ಮಂಡಳಿಯ ಪ್ರೋತ್ಸಾಹ ಈ ಸಾಧನೆಗೆ ಕಾರಣ. ಮನೆಯಲ್ಲಿ ಬೆಳಗ್ಗೆ ಮತ್ತು ಸಂಜೆ ವೇಳೆ ಓದಿದ ಪರಿಣಾಮ ಈ ಸಾಧನೆ ಮಾಡಿದೆ. ಮುಂದೆ ಪಿಯುಸಿಯಲ್ಲಿ ಪಿಸಿಎಂಬಿ ವಿಷಯ ತೆಗೆದು ಕೊಳ್ಳಲು ನಿರ್ಧರಿಸಿದ್ದೇನೆ ಎಂದು ಅಂಕಿತಾ ಆಚಾರ್ಯ ತಿಳಿಸಿದ್ದಾರೆ.
Next Story