ಎಸೆಸೆಲ್ಸಿ: ಬಂಟ್ವಾಳ ತೌಹೀದ್ ಆಂಗ್ಲ ಮಾಧ್ಯಮ ಪ್ರೌಢಶಾಲೆಗೆ ಶೇ. 100 ಫಲಿತಾಂಶ
ಬಂಟ್ವಾಳ, ಎ. 30: ಈ ಸಾಲಿನ ಎಸೆಸೆಲ್ಸಿ ಪರೀಕ್ಷೆಯಲ್ಲಿ ಬಂಟ್ವಾಳ ಕೆಳಗಿನಪೇಟೆ ತೌಹೀದ್ ಆಂಗ್ಲ ಮಾಧ್ಯಮ ಪ್ರೌಢಶಾಲೆಯು ಶೇ. 100ರಷ್ಟು ಫಲಿತಾಂಶ ದಾಖಲಿಸಿದೆ.
ಪರೀಕ್ಷೆಗೆ ಹಾಜರಾದ 74 ವಿದ್ಯಾರ್ಥಿಗಳಲ್ಲಿ 12 ವಿದ್ಯಾರ್ಥಿಗಳು ವಿಶಿಷ್ಠ ಶ್ರೇಣಿ, 57 ವಿದ್ಯಾರ್ಥಿಗಳು ಪ್ರಥಮ ದರ್ಜೆ, 5 ವಿದ್ಯಾರ್ಥಿಗಳು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದು, ಸಂಸ್ಥೆಗೆ ಸತತ ಮೂರು ವರ್ಷಗಳಿಂದ ಶೇ. 100 ಫಲಿತಾಂಶವನ್ನು ದಾಖಲಿಸಿದೆ.
ವಿದ್ಯಾರ್ಥಿನಿ ಮರಿಯಮ್ ಹಾಶ್ಮಿ ಅವರು 603 ಅಂಕಗಳನ್ನು ಗಳಿಸಿ ಶಾಲೆಗೆ ಕೀರ್ತಿಯನ್ನು ತಂದಿರುತ್ತಾಳೆ ಎಂದು ಶಾಲೆಯ ಪ್ರಟಕನೆ ತಿಳಿಸಿದೆ.
ಈಕೆ ಬೋಗೊಡಿ ಬಿ.ಎಂ. ಇಲ್ಯಾಸ್ ಹಾಗೂ ಆಯಿಶಾ ದಂಪತಿಯ ಪುತ್ರಿ.
Next Story