ಎಸೆಸೆಲ್ಸಿ ಫಲಿತಾಂಶ: ಉಡುಪಿ ಜಿಲ್ಲೆ ಶೇಕಡಾವಾರು 5ನೇ, ಗುಣಮಟ್ಟದಲ್ಲಿ 2ನೇ ಸ್ಥಾನ
36 ಶಾಲೆಗಳಿಗೆ ಶೇ.100 ಫಲಿತಾಂಶ
ಉಡುಪಿ, ಎ.30: ಇಂದು ಪ್ರಕಟಗೊಂಡ ಎಸೆಸೆಲ್ಸಿ ಪರೀಕ್ಷಾ ಫಲಿತಾಂಶದಲ್ಲಿ ಕಳೆದೆರಡು ವರ್ಷಗಳ ಅಗ್ರಸ್ಥಾನಿ ಉಡುಪಿ ಜಿಲ್ಲೆ ಈ ಬಾರಿ ಶೇಕಡಾವಾರು ಫಲಿತಾಂಶದಲ್ಲಿ ಐದನೇ ಸ್ಥಾನಕ್ಕೆ ಜಾರಿದ್ದು, ಈ ಬಾರಿಯಿಂದ ಆರಂಭಿಸಲಾದ ಗುಣಮಟ್ಟದ ಫಲಿತಾಂಶದಲ್ಲಿ ರಾಜ್ಯಕ್ಕೆ ಎರಡನೇ ಸ್ಥಾನ ಪಡೆದಿದೆ.
ಉಡುಪಿ ಜಿಲ್ಲೆಯ ಶೇ.87.97 ವಿದ್ಯಾರ್ಥಿಗಳು ಈ ಬಾರಿ ಉತ್ತೀರ್ಣ ಗೊಂಡಿದ್ದು, ಈ ಮೂಲಕ ಹಾಸನ(89.33), ರಾಮನಗರ(88.49), ಬೆಂಗಳೂರು ಗ್ರಾಮಾಂತರ(88.34) ಹಾಗೂ ಉತ್ತರ ಕನ್ನಡ (88.12)ದ ಬಳಿಕ ಐದನೇ ಸ್ಥಾನ ಪಡೆದಿದೆ. 2018ರಲ್ಲಿ ಉಡುಪಿ ಜಿಲ್ಲೆಯ ವಿದ್ಯಾರ್ಥಿಗಳು ಶೇ.88.18 ಸಾಧನೆಯೊಂದಿಗೆ ರಾಜ್ಯಕ್ಕೆ ಅಗ್ರಸ್ಥಾನಿ ಯಾಗಿದ್ದರು. ಇದಕ್ಕೆ ಮೊದಲು 2017, 2015 ಹಾಗೂ 2012ರಲ್ಲೂ ಉಡುಪಿ ಜಿಲ್ಲೆ ರಾಜ್ಯದಲ್ಲಿ ಅಗ್ರಗಣ್ಯ ಶೈಕ್ಷಣಿಕ ಜಿಲ್ಲೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು.
ಆದರೆ ಈ ವರ್ಷದಿಂದ ಪ್ರಾರಂಭಿಸಲಾದ ಗುಣಮಟ್ಟದ ಶಿಕ್ಷಣ ಫಲಿತಾಂಶದಲ್ಲಿ ಉಡುಪಿ ಜಿಲ್ಲೆ ಶೇ.79.21ರ ಸಾಧನೆಯೊಂದಿಗೆ ಹಾಸನ (ಶೇ.81.88) ಜಿಲ್ಲೆಯ ಬಳಿಕ ಎರಡನೇ ಸ್ಥಾನದಲ್ಲಿದೆ. ಜಿಲ್ಲೆಯ ವಿದ್ಯಾರ್ಥಿಗಳು ಪಡೆದ ವಿಶಿಷ್ಟ ದರ್ಜೆ ಮತ್ತು ಪ್ರಥಮ ಶ್ರೇಣಿಯ ಫಲಿತಾಂಶ, ಅಲ್ಲದೇ ಒಟ್ಟಾರೆಯಾಗಿ ಜಿಲ್ಲೆಯ ವಿದ್ಯಾರ್ಥಿಗಳ ತೇರ್ಗಡೆಯ ಸರಾಸರಿಯನ್ನು ಪರಿಗಣಿಸಿ ಇದನ್ನು ನಿರ್ಧರಿಸಲಾಗುತ್ತಿದೆ.
ಉಡುಪಿ ಜಿಲ್ಲೆಯಲ್ಲಿ ಈ ಬಾರಿ ಒಟ್ಟು 36 ಶಾಲೆಗಳು ಶೇ.100 ಫಲಿತಾಂಶ ಪಡೆದಿವೆ. ಇವುಗಳಲ್ಲಿ 11 ಸರಕಾರಿ ಪ್ರೌಢ ಶಾಲೆಗಳು, ಐದು ಅನುದಾನಿತ ಪ್ರೌಢ ಶಾಲೆಗಳು ಹಾಗೂ 20 ಅನುದಾನ ರಹಿತ ಪ್ರೌಢ ಶಾಲೆಗಳು ಸೇರಿವೆ ಎಂದು ಡಿಡಿಪಿಐ ಶೇಷಶಯನ ಕಾರಿಂಜ ತಿಳಿಸಿದ್ದಾರೆ.
ಈ ಬಾರಿ ಪರೀಕ್ಷೆ ಬರೆದ 13,003 ರೆಗ್ಯುಲರ್ ವಿದ್ಯಾರ್ಥಿಗಳಲ್ಲಿ 11,457 ವಿದ್ಯಾರ್ಥಿಗಳು (ಶೇ.87.97)ತೇರ್ಗಡೆಗೊಂಡಿದ್ದಾರೆ. 6527 ಬಾಲಕರಲ್ಲಿ 5555 ಮಂದಿ ತೇರ್ಗಡೆಗೊಂಡಿದ್ದರೆ, 6476 ಬಾಲಕಿಯರಲ್ಲಿ 5902 ಮಂದಿ ಉತ್ತೀರ್ಣರಾಗಿದ್ದಾರೆ. ಇನ್ನುಳಿದಂತೆ 585 ರೆಗ್ಯುಲರ್ ಪುನರಾವರ್ತಿತ ವಿದ್ಯಾರ್ಥಿಗಳಲ್ಲಿ 256 ಮಂದಿ ತೇರ್ಗಡೆಗೊಂಡಿದ್ದರೆ, ಪರೀಕ್ಷೆ ಬರೆದ 400 ಖಾಸಗಿ ವಿದ್ಯಾರ್ಥಿಗಳಲ್ಲಿ ಕೇವಲ 31 ಮಂದಿ ಹಾಗೂ 125 ಮಂದಿ ಖಾಸಗಿ ಪುನರಾರ್ವತಿತ ವಿದ್ಯಾರ್ಥಿಗಳಲ್ಲಿ 26 ಮಂದಿ ಉತ್ತೀರ್ಣರಾಗಿದ್ದಾರೆ ಎಂದವರು ನುಡಿದರು.
ಜಿಲ್ಲೆಯ 111 ಸರಕಾರಿ ಶಾಲೆಗಳಲ್ಲಿ ಪರೀಕ್ಷೆ ಬರೆದ 5849 ವಿದ್ಯಾರ್ಥಿಗಳಲ್ಲಿ 4972 ಮಂದಿ (ಶೇ.85.01)ಪಾಸಾಗಿದ್ದಾರೆ. ಜಿಲ್ಲೆಯ 71 ಅನುದಾನಿತ ಶಾಲೆಗಳಲ್ಲಿ 3280 ವಿದ್ಯಾರ್ಥಿಗಳಲ್ಲಿ 2813 ಮಂದಿ (ಶೇ.85.76) ತೇರ್ಗಡೆ ಗೊಂಡಿದ್ದರೆ, 81 ಅನುದಾನ ರಹಿತ ಶಾಲೆಗಳಲ್ಲಿ 3874 ಮಂದಿ ಪರೀಕ್ಷೆ ಬರೆದಿದ್ದು, ಇವರಲ್ಲಿ 3672 ಮಂದಿ (ಶೇ.94.79) ತೇರ್ಗಡೆಗೊಂಡಿದ್ದಾರೆ.
ಆಂಗ್ಲ ಮಾಧ್ಯಮ ಮೇಲುಗೈ: ಜಿಲ್ಲೆಯಲ್ಲಿ ಆಂಗ್ಲ ಮಾಧ್ಯಮ ವಿದ್ಯಾರ್ಥಿಗಳು ಉತ್ತೀರ್ಣತೆಯಲ್ಲಿ ಮೇಲುಗೈ ಹೊಂದಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ಪರೀಕ್ಷೆ ಬರೆದ 6219 ವಿದ್ಯಾರ್ಥಿಗಳಲ್ಲಿ 5930 ಮಂದಿ (ಶೇ.95.35) ತೇರ್ಗಡೆ ಗೊಂಡಿದ್ದರೆ, ಕನ್ನಡ ಮಾಧ್ಯಮದಲ್ಲಿ ಬರೆದ 6784 ಮಂದಿಯಲ್ಲಿ 5527 ಮಂದಿ (ಶೇ.81.47) ಉತ್ತೀರ್ಣರಾಗಿದ್ದಾರೆ.
ವಿಷಯವಾರು ಫಲಿತಾಂಶ: ಜಿಲ್ಲೆಯಲ್ಲಿ ಪ್ರಥಮ ಭಾಷೆಯಲ್ಲಿ ಶೇ.98.66, ದ್ವಿತೀಯ ಭಾಷೆಯಲ್ಲಿ ಶೇ.97.06, ತೃತೀಯ ಭಾಷೆಯಲ್ಲಿ ಶೇ.96.83, ಗಣಿತದಲ್ಲಿ ಶೇ.91.18,ವಿಜ್ಞಾನದಲ್ಲಿ ಶೇ.94.38 ಹಾಗೂ ಸಮಾಜ ವಿಜ್ಞಾನ ದಲ್ಲಿ ಶೇ.94.10 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ವಲಯವಾರು ಫಲಿತಾಂಶ: ಜಿಲ್ಲೆಯ ಐದು ವಲಯಗಳ ಫಲಿತಾಂಶದ ವಿವರ ಹೀಗಿದೆ. ಕುಂದಾಪುರ ವಲಯದಲ್ಲಿ ಒಟ್ಟು 2294 ವಿದ್ಯಾರ್ಥಿಗಳಲ್ಲಿ 2086 ಮಂದಿ ತೇರ್ಗಡೆಗೊಂಡು ಶೇ.90.93, ಕಾರ್ಕಳ ವಲಯದಲ್ಲಿ 2667 ವಿದ್ಯಾರ್ಥಿಗಳಲ್ಲಿ 2364 ಮಂದಿ ತೇರ್ಗಡೆಗೊಂಡು ಶೇ.88.63, ಬ್ರಹ್ಮಾವರ ವಲಯದಲ್ಲಿ 2766 ವಿದ್ಯಾರ್ಥಿಗಳಲ್ಲಿ 2445 ಮಂದಿ ತೇರ್ಗಡೆಗೊಂಡು ಶೇ.88.39, ಉಡುಪಿ ವಲಯದಲ್ಲಿ 3375 ವಿದ್ಯಾರ್ಥಿಗಳಲ್ಲಿ 2890 ಮಂದಿ ಪಾಸಾಗಿ ಶೇ.85.62 ಹಾಗೂ ಬೈಂದೂರು ವಲಯದಲ್ಲಿ 1901 ಮಂದಿ ವಿದ್ಯಾರ್ಥಿಗಳಲ್ಲಿ 1672 ಮಂದಿ ತೇರ್ಗಡೆಗೊಂಡು ಶೇ.87.95 ಫಲಿತಾಂಶ ಬಂದಿದೆ.
ಪ್ರತಿ ಭಾಷೆಯಲ್ಲಿ ಶೇ.100 ಅಂಕ ಪಡೆದವರು: ಪ್ರಥಮ ಭಾಷೆಯಲ್ಲಿ 183 ಮಂದಿ, ದ್ವಿತೀಯ ಭಾಷೆಯಲ್ಲಿ 88 ಮಂದಿ, ತೃತೀಯ ಭಾಷೆಯಲ್ಲಿ 238 ಮಂದಿ, ಗಣಿತದಲ್ಲಿ 68 ಮಂದಿ, ವಿಜ್ಞಾನದಲ್ಲಿ 18 ಮಂದಿ ಹಾಗೂ ಸಮಾಜ ವಿಜ್ಞಾನದಲ್ಲಿ 35 ಮಂದಿ ಅತಿ ಹೆಚ್ಚು ಅಂಕ ಗಳಿಸಿದ್ದಾರೆ.
ಜಾತಿವಾರು ಫಲಿತಾಂಶ: ಜಿಲ್ಲೆಯಲ್ಲಿ ಪರೀಕ್ಷೆ ಬರೆದ ಒಟ್ಟು 1027 ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಲ್ಲಿ 802 ಮಂದಿ ತೇರ್ಗಡೆಗೊಂಡಿದ್ದು ಶೇ.78.09 ಫಲಿತಾಂಶ ಬಂದಿದೆ. ಪರಿಶಿಷ್ಟ ಪಂಗಡದ 713 ವಿದ್ಯಾರ್ಥಿಗಳಲ್ಲಿ 582 ಮಂದಿ ತೇರ್ಗಡೆಗೊಂಡು ಶೇ.81.63 ಫಲಿತಾಂಶ ದಾಖಲಾಗಿದೆ. ಇನ್ನುಳಿದಂತೆ ಪ್ರವರ್ಗ-1ರಲ್ಲಿ ಶೇ.87.24, 2ಎಯಲ್ಲಿ ಶೇ.89.66, 2ಬಿಯಲ್ಲಿ ಶೇ.83.92, 3ಎಯಲ್ಲಿ 86.03, 3ಬಿಯಲ್ಲಿ ಶೇ.93.11 ಹಾಗೂ ಇತರೆ ಶೇ.94.11 ಉತ್ತೀರ್ಣತೆ ದಾಖಲಾಗಿದೆ.
ಜಿಲ್ಲೆಯಲ್ಲಿ ಗರಿಷ್ಠ 10 ಅಂಕಗಳನ್ನು ಪಡೆದ ವಿದ್ಯಾರ್ಥಿಗಳು
1.ಅನಘ ಉಡುಪ, ಕೋಟ ವಿವೇಕ ಆಂಗ್ಲ ಮಾಧ್ಯಮ ಶಾಲೆ ಕೋಟ (623ಅಂಕ), 2.ಪ್ರಾಪ್ತಿ ಶೆಟ್ಟಿ, ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಶಾಲೆ ಗಣಿತ ನಗರ ಕುಕ್ಕಂದೂರು (622), 3.ಧನ್ಯಾ ಎಸ್., ಸೈಂಟ್ ಸಿಸಿಲೀಸ್ ಆಂಗ್ಲ ಮಾಧ್ಯಮ ಶಾಲೆ ಉಡುಪಿ(622), 4.ಚಂದನ ಶೆಣೈ, ಸೈಂಟ್ ಫ್ರಾನ್ಸಿಸ್ ಆಂಗ್ಲ ಮಾಧ್ಯಮ ಶಾಲೆ, ಮುದರಂಗಡಿ (622), 5.ಸುಪ್ರಿತಾ ನಾಯಕ್, ಟಿ.ಎ.ಪೈ ಆಂಗ್ಲ ಮಾಧ್ಯಮ ಶಾಲೆ ಕುಂಜಿಬೆಟ್ಟು ಉಡುಪಿ (622),6.ಸುಮಂತ ಎಸ್.ಕಾರಂತ, ಟಿ.ಎ.ಪೈ ಆಂಗ್ಲಮಾಧ್ಯಮ ಶಾಲೆ ಕುಂಜಿಬೆಟ್ಟು ಉಡುಪಿ (622), 7.ಬಿ.ವಿಭಾ ಶೆಣೈ, ಎಸ್.ಬಿ.ಹೈಸ್ಕೂಲ್ ಕಾರ್ಕಳ (621), 8.ಅಂಕಿತ ಪಿ.ಆಚಾರ್ಯ, ಶಾಂತಿನಿಕೇತನ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಅಲೆವೂರು (621), 9.ಶ್ರುತಾ, ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಗಣಿತ ನಗರ, ಕುಕ್ಕಂದೂರು ಕಾರ್ಕಳ (621), 10.ಎಂ.ಮನ್ವಿತ ಪ್ರಭು, ಜ್ಞಾನಸುಧಾ ಆಂದ್ಲ ಮಾಧ್ಯಮ ಪ್ರೌಢ ಶಾಲೆ ಗಣಿತ ನಗರ, ಕುಕ್ಕುಂದೂರು ಕಾರ್ಕಳ (620), 11.ಸಂಜನಾ ಜೆ., ಶ್ರೀವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಕುಂದಾಪುರ (620), 12.ಸೂರಜ್ ಎನ್.ಎಸ್., ವಿ.ಕೆ.ಆರ್.ಆಚಾರ್ಯ ಸ್ಮಾರಕ ಆಂಗ್ಲ ಮಾಧ್ಯವು ಪ್ರೌಢ ಶಾಲೆ ಕುಂದಾಪುರ (620)
ಉಡುಪಿ ಜಿಲ್ಲೆಯಲ್ಲಿ ಶೇ.100 ಫಲಿತಾಂಶ ಪಡೆದ ಶಾಲೆಗಳು
ಇಂದು ಪ್ರಕಟಗೊಂಡ ಈ ಬಾರಿಯ ಎಸೆಸೆಲ್ಸಿ ಫಲಿತಾಂಶ ದಲ್ಲಿ ಜಿಲ್ಲೆಯ ಒಟ್ಟು 36 ಶಾಲೆಗಳು ಶೇ.100 ಫಲಿತಾಂಶದ ಸಾಧನೆ ಮಾಡಿವೆ. ಇವುಗಳಲ್ಲಿ 11 ಸರಕಾರಿ ಶಾಲೆಗಳು, ಐದು ಅನುದಾನಿತ ಹಾಗೂ 20 ಅನುದಾನರಹಿತ ಶಾಲೆಗಳಿವೆ.
ಸರಕಾರಿ ಶಾಲೆಗಳು: ಸರಕಾರಿ ಪ್ರೌಢ ಶಾಲೆ ಹೆಜಮಾಡಿಕೋಡಿ ಉಡುಪಿ, ಸರಕಾರಿ ಪ್ರೌಢ ಶಾಲೆ ಅಮಾಸೆಬೈಲು ಕುಂದಾಪುರ, ಸರಕಾರಿ ಪ್ರೌಢ ಶಾಲೆ ಸೂಡಾ ಕಾರ್ಕಳ, ಸರಕಾರಿ ಪ್ರೌಢ ಶಾಲೆ ಕೋಡಿಕನ್ಯಾಣ ಉಡುಪಿ, ಕೆ.ಜಿ. ಜಗನ್ನಾಥ ರಾವ್ ಸರಕಾರಿ ಕಾಂಪೋಸಿಟ್ ಶಾಲೆ ಕೋಣಿ ಕುಂದಾಪುರ, ಸರಕಾರಿ ಪ್ರೌಢ ಶಾಲೆ ಹೆಸ್ಕತ್ತೂರು ಕುಂದಾಪುರ, ಮೊರಾರ್ಜಿ ದೇಸಾಯಿ ಹಿಂದುಳಿದ ವರ್ಗಗಳ ವಸತಿ ಶಾಲೆ, ಬಜಗೋಳಿ ಕಾರ್ಕಳ, ಸರಕಾರಿ ಪ್ರೌಢ ಶಾಲೆ, ಚಿತ್ತೂರು ಬೈಂದೂರು, ಮೊರಾರ್ಜಿ ದೇಸಾಯಿ ಹಿಂದುಳಿದ ವರ್ಗಗಳ ವಸತಿ ಶಾಲೆ ಬೈಂದೂರು, ಮೊರಾರ್ಜಿ ದೇಸಾಯಿ ಹಿಂದುಳಿದ ವರ್ಗಗಳ ವಸತಿ ಶಾಲೆ ಕೋಟೇಶ್ವರ ಕುಂದಾಪುರ, ಮೊರಾರ್ಜಿ ದೇಸಾಯಿ ಹಿಂದುಳಿದ ವರ್ಗಗಳ ವಸತಿ ಶಾಲೆ, ಹಿರೇಬೆಟ್ಟು ಪಟ್ಲ ಕಾಪು.
ಅನುದಾನಿತ ಶಾಲೆಗಳು: ಸೈಂಟ್ ಜೋಸೆಫ್ ಹೈಸ್ಕೂಲ್ ಕುಂದಾಪುರ, ಜ್ಯೋತಿ ಹೈಸ್ಕೂಲ್ ಅಜೆಕಾರು ಕಾರ್ಕಳ, ಡಾ.ಎನ್ಎಸ್ಎಎಂ ಜೂನಿಯರ್ ಕಾಲೇಜು ನಿಟ್ಟೆ ಕಾರ್ಕಳ, ಪಿ.ಕೆ.ಎಸ್.ಹೈಸ್ಕೂಲ್ ಕಳತ್ತೂರು ಉಡುಪಿ, ಮಹಾತ್ಮ ಗಾಂಧಿ ವಸತಿ ಪ್ರೌಢ ಶಾಲೆ ಕುಕ್ಕಂದೂರು ಕಾರ್ಕಳ.
ಅನುದಾನ ರಹಿತ ಶಾಲೆಗಳು: ಶ್ರೀನಾರಾಯಣಗುರು ಆಂಗ್ಲ ಮಾದ್ಯಮ ಪ್ರೌಢ ಶಾಲೆ ಮಲ್ಪೆ ಉಡುಪಿ, ಕ್ರೈಸ್ಟ್ಕಿಂಗ್ ಆಂಗ್ಲ ಮಾದ್ಯಮ ಪಿಯು ಕಾಲೇಜು ಕಾರ್ಕಳ, ಶ್ರೀವೆಂಕಟರಮಣ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಕುಂದಾಪುರ, ಎಸ್.ವಿ.ಎಸ್.ಆಂಗ್ಲ ಮಾದ್ಯಮ ಪ್ರೌಢ ಶಾಲೆ ಗಂಗೊಳ್ಳಿ ಕುಂದಾಪುರ, ಎಚ್.ಎಂ.ಎಂ.ಎಸ್.ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಬೈಂದೂರು, ಮಹಾಲಕ್ಷ್ಮೀ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಉಚ್ಚಿಲ ಉಡುಪಿ, ವಿವೇಕ ಆಂಗ್ಲ ಮಾಧ್ಯಮ ಹೈಸ್ಕೂಲ್ ಕೋಟ, ಎಸ್.ಆರ್.ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಹೆಬ್ರಿ, ಶುಭದಾ ಹೈಸ್ಕೂಲ್ ಮಸ್ಕಿ ಕಿರಿಮಂಜೇಶ್ವರ ಬೈಂದೂರು, ಎಸ್.ಎಂ.ಎಸ್. ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಬ್ರಹ್ಮಾವರ.
ಮದರ್ತೆರೇಸಾ ಸ್ಮಾರಕ ಪ್ರೌಢ ಶಾಲೆ ಶಂಕರನಾರಾಯಣ ಕುಂದಾಪುರ, ಸ್ಟೆಲ್ಲಾ ಮಾರಿಸ್ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಗಂಗೊಳ್ಳಿ, ಸರಸ್ವತಿ ವಿದ್ಯಾಲಯ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ವಿದ್ಯಾನಗರ ಸಿದ್ಧಾಪುರ, ಶ್ರೀಅನಂತೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಬೈಲಕೆರೆ ಉಡುಪಿ, ಲಿಟ್ಲ್ಫ್ಲವರ್ ಆಂಗ್ಲ ಮಾದ್ಯಮ ಪ್ರೌಢ ಶಾಲೆ ರಂಗನಪಲ್ಕೆ ಕೌಡೂರು ಕಾರ್ಕಳ, ಶ್ರೀವಿವೇಕಾನಂದ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಉಪ್ಪುಂದ ಬೈಂದೂರು, ಸೈಂಟ್ ಮಾರಿಯಾ ಗೊರಟ್ಟಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಹಿರ್ಗಾನ ಕುಕ್ಕಂದೂರು, ಕಾರ್ಕಳ ಜ್ಞಾನಸುಧಾ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಗಣಿತ ನಗರ ಕುಕ್ಕಂದೂರು ಕಾರ್ಕಳ, ಸೈಂಟ್ ಅಂತೋನಿ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಪಾಂಡೇಶ್ವರ ಸಾಸ್ತಾನ, ಸೈಂಟ್ ಜೋಸೆಫ್ ಆಂಗ್ಲ ಮಾಧ್ಯು ಪ್ರೌಢ ಶಾಲೆ ಬೆಳ್ಮಣ್ಣು ಕಾರ್ಕಳ.