ಎಸೆಸೆಲ್ಸಿ : ಸೈಯದ್ ಮದನಿ ಆಂಗ್ಲ ಮಾಧ್ಯಮ ಶಾಲೆಗೆ ಶೇ.100 ಫಲಿತಾಂಶ
ಮಂಗಳೂರು, ಎ.30: ಮಾರ್ಚ್ ತಿಂಗಳಲ್ಲಿ ನಡೆದ 2018-2019ನೇ ಸಾಲಿನ ಎಸೆಸೆಲ್ಸಿ ಫಲಿತಾಂಶವು ಮಂಗಳವಾರ ಪ್ರಕಟವಾಗಿದ್ದು, ಉಳ್ಳಾಲದ ಸೈಯದ್ ಮದನಿ ಚಾರಿಟೇಬಲ್ ಟ್ರಸ್ಟ್ ಅಧೀನದ ಕಲ್ಲಾಪುವಿನ ಸೈಯದ್ ಮದನಿ ಆಂಗ್ಲ ಮಾಧ್ಯಮ ಶಾಲೆಯು ಶೇ.100 ಫಲಿತಾಂಶ ಪಡೆದಿದೆ.
ಸುಝಾನಾ ಆಯುಷಾ (ಶೇ.92), ಮೈಮುನಾಥ್ ಅಫ್ರಾ (ಶೇ.87), ಸಹರಾ ಮುಶ್ರಿಫಾ (ಶೇ.87) ಹಾಗೂ ಮುಹಮ್ಮದ್ ಹಸನ್ ಜವಾದ್ (ಶೇ.86) ಅಂಕ ಪಡೆದು ಶಾಲೆಗೆ ಕೀರ್ತಿ ತಂದಿದ್ದಾರೆ.
ಸೈಯದ್ ಮದನಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಉತ್ತೀರ್ಣರಾದ 37 ವಿದ್ಯಾರ್ಥಿಗಳಲ್ಲಿ ನಾಲ್ವರು ಡಿಸ್ಟಿಂಕ್ಷನ್, 31 ಪ್ರಥಮ ದರ್ಜೆ, ಇಬ್ಬರು ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ.
Next Story