ಗ್ರೀನ್ವೀವ್ ಪ್ರೌಢಶಾಲೆಗೆ ಶೇ.84 ಫಲಿತಾಂಶ
ಮಂಗಳೂರು, ಎ.30: ದ.ಕ ಹಾಗೂ ಉಡುಪಿ ಜಿಲ್ಲೆಯ ಜಮೀಯ್ಯತುಲ್ ಫಲಾಹ್ನ ಅಧೀನದ ಅಡ್ಕರೆಪಡ್ಪುವಿನ ಗ್ರೀನ್ ವೀವ್ ಪ್ರೌಢ ಶಾಲೆಯಲ್ಲಿ 21 ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ. ಈ ಮೂಲಕ ಶೇ.84 ಫಲಿತಾಂಶ ಬಂದಿದೆ.
ಜೆಸಿಕಾ ಡಿಸೋಜ 540 (ಶೇ.86.4) ಅಂಕಗಳೊಂದಿಗೆ ಪ್ರಥಮ ಸ್ಥಾನ ಹಾಗೂ ಫಾತಿಮತ್ ಜಝೀಲ 523 (ಶೇ.83.68) ಅಂಕದೊಂದಿಗೆ ದ್ವಿತೀಯ ಸ್ಥಾನ ಮತ್ತು ಆಯಿಶತುಲ್ ಶಿಹಾನ 512 (ಶೇ.81.92) ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾರೆ.
Next Story