ಮಾಲೆಗಾಂವ್ ಸ್ಫೋಟವನ್ನು ಸಮರ್ಥಿಸಿದ ಮಾಜಿ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ವಿರುದ್ಧ ಎಫ್ಐಆರ್
ಉಡುಪಿ: ಮಾಲೆಗಾಂವ್ ಸ್ಫೋಟವನ್ನು ಸಮರ್ಥಿಸಿದ ಮಾಜಿ ಪೊಲೀಸ್ ಅಧಿಕಾರಿ ಅನುಪಮಾ ಶೆಣೈ ವಿರುದ್ಧ ಉಡುಪಿಯ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಬುಧವಾರ ಎಫ್ಐಆರ್ ದಾಖಲಾಗಿದೆ.
ಅನುಪಮಾ ಶೆಣೈ ಫೇಸ್ ಬುಕ್ ನಲ್ಲಿ “ಇಸ್ಲಾಮಿಕ್ ಉಗ್ರವಾದದ ಬಗ್ಗೆ ಮಾತನಾಡಿದ ಕೂಡಲೆ ಹೇಳುವುದು ಮಾಲೆಗಾಂವ್ ಬ್ಲಾಸ್ಟ್ ಬಗ್ಗೆ, ಸಾಧ್ವಿ ಹಾಗೂ ಪುರೋಹಿತ್ ಬಗ್ಗೆ. ಅದನ್ನು ಹಿಂದೂ ಭಯೋತ್ಪಾದನೆ ಎಂದು ಘೋಷಿಸಿ ಎಂದಿನಂತೆ ಬಾಂಧವರಿಗೆ ಬಕೆಟ್ ಹಿಡಿಯಲು ಹೋಗಿದ್ದು ಕಾಂಗ್ರೆಸ್ ಪಕ್ಷ. ಒಂದು ವೇಳೆ ಸಾಧ್ವಿ ಹಾಗೂ ಪುರೋಹಿತ್ ರವರು ಬ್ಲಾಸ್ಟ್ ಮಾಡಿದ್ದೇ ಆದಲ್ಲಿ ಅದು ಇಸ್ಲಾಮಿಕ್ ಭಯೋತ್ಪಾದನೆ ವಿರುದ್ಧ ಪ್ರತಿಭಟನೆಯಾಗಿಯೇ ವಿನಃ ನಿಮ್ಮ ಹಾಗೆ ಧರ್ಮ ಸ್ಥಾಪನೆಗಾಗಿ ಅಲ್ಲ” ಎಂದಿದ್ದು, ಭಯೋತ್ಪಾದನಾ ಕೃತ್ಯವನ್ನು ಸಮರ್ಥಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Next Story