ಮದ್ರಸ ಪಬ್ಲಿಕ್ ಪರೀಕ್ಷೆ: ಬೋಳಾರ ನಮಾಉಲ್ ಹುದಾಗೆ ಶೇ.100 ಫಲಿತಾಂಶ
ಮಂಗಳೂರು,ಮೇ 2: ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಆಫ್ ಇಂಡಿಯಾ ಮಾರ್ಚ್ ನಲ್ಲಿ ಹಮ್ಮಿಕೊಂಡ ಏಳನೇ ತರಗತಿಯ ಇಂಗ್ಲೀಷ್ ಮೀಡಿಯಂ ಪಬ್ಲಿಕ್ ಪರೀಕ್ಷೆಯಲ್ಲಿ ನಮಾಉಲ್ ಹುದಾ ಸುನ್ನೀ ಅರೇಬಿಕ್ ಮದರಸ ಶುಭಾಶ್ ನಗರ, ಬೋಳಾರ ನೂರು ಶೇಕಡಾ ಫಲಿತಾಂಶ ಪಡೆದುಕೊಂಡಿದೆ.
ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳಲ್ಲಿ ಮುಹಮ್ಮದ್ ಇಸ್ಮಾಯಿಲ್ ಹಿಶಾಂ ಡಿಸ್ಟಿಂಕ್ಷನ್ ಮತ್ತು ಶಾಝ್ಮ ಮರಿಯಂ, ಖದೀಜ ಸಮ್ರೀನ್, ಮುಹಮ್ಮದ್ ಹಾಶಿದ್, ಮುಹಮ್ಮದ್ ಹಾರೂನ್ ಸಾಹಿಲ್ ಮತ್ತು ಫಾತಿಮಾ ಅಫೀದಾ ಪ್ರಥಮ ದರ್ಜೆ ಹಾಗೂ ಶಫಾಫ್, ಲತೀಫಾ ಅಝೀಮಾ ಮತ್ತು ಅಬ್ದುಲ್ ಖಾದರ್ ಅಫ್ರೀದ್ ದ್ವಿತೀಯ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ ಎಂದು ನಮಾಉಲ್ ಹುದಾ ಸುನ್ನೀ ಅರೇಬಿಕ್ ಇಂಗ್ಲೀಷ್ ಮೀಡಿಯಂ ಮದ್ರಸದ ಮುಖ್ಯೋಪಾಧ್ಯಾಯ ಹನೀಫ್ ಸಖಾಫಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ತೇರ್ಗಡೆಯಾದ ವಿದ್ಯಾರ್ಥಿಗಳಿಗೆ ಆಡಳಿತ ಸಮಿತಿ ಅಧ್ಯಕ್ಷ ಅಬೂಬಕರ್ ಹಾಜಿ ಹಾಗೂ ಕಾರ್ಯದರ್ಶಿ ಅಬ್ದುಲ್ ರಹೀಮ್ ಮತ್ತು ಸದಸ್ಯರು ಅಭಿನಂದನೆ ಸಲ್ಲಿಸಿದ್ದಾರೆ.
Next Story