ಉಮರ್ ದಾರಿಮಿ ಉಸ್ತಾದ್ಗೆ ಒಎಸ್ಎಫ್ ಬೀಳ್ಕೊಡುಗೆ
ಮಂಗಳೂರು, ಮೇ 2: ಹನ್ನೊಂದು ವರ್ಷಗಳ ಕಾಲ ಬೆಂಗ್ರೆ ಅಲ್ ಮದ್ರಸತುಲ್ ದೀನಿಯ ಮದ್ರಸದ ಸದರ್ ಉಸ್ತಾದ್ರಾಗಿ ಕಾರ್ಯನಿರ್ವಹಿಸಿದ ಕೆ.ಎಲ್.ಉಮರ್ ದಾರಿಮಿ ಉಸ್ತಾದ್ ಅವರನ್ನು ಬೆಂಗ್ರೆಯ ಹಳೆಯ ವಿದ್ಯಾರ್ಥಿಗಳ ಒಕ್ಕೂಟ (ಒಎಸ್ಎಫ್) ಟ್ರಸ್ಟ್ನಿಂದ ಒಎಸ್ಎಫ್ಸಭಾಂಗಣದಲ್ಲಿ ಬೀಳ್ಕೊಡಲಾಯಿತು.
ಒಎಸ್ಎಫ್ ಸಂಘಟನೆಯ ಸಲಹೆಗಾರ ಹಾಗೂ ಜಮಾತ್ ಕಮಿಟಿಯ ಮಾಜಿ ಉಪಾಧ್ಯಕ್ಷ ಬಿಲಾಲ್ ಮೊಯ್ದೀನ್ ಮಾತನಾಡಿ, ಉಮರ್ ದಾರಿಮಿ ಉಸ್ತಾದರ ವ್ಯಕ್ತಿತ್ವವು ಸರಳ ಸ್ವಭಾವದ್ದಾಗಿದೆ. ಇಂತಹವರು ನಮಗೆ ಮಾದರಿಯಾಗಿದ್ದಾರೆ. ಉಮರ್ ದಾರಿಮಿ ಉಸ್ತಾದ್ ಬೆಂಗ್ರೆಯ ಉಸ್ತಾದ್ ಮಾತ್ರವಲ್ಲದೆ, ಇಡೀ ಜಿಲ್ಲೆಯ ಸುನ್ನಿ ಸಮುದಾಯದ ಮಾರ್ಗದರ್ಶಿಯೂ ಆಗಿದ್ದಾರೆ ಎಂದು ತಿಳಿಸಿದರು
ಜಿಲ್ಲೆಯಲ್ಲಿಯೇ ಅತಿಹೆಚ್ಚು ವಿಧ್ಯಾರ್ಥಿಗಳಿರುವ ನಮ್ಮ ಮದ್ರಸವನ್ನು ಶಿಸ್ತುಬದ್ಧ ಮದ್ರಸವನ್ನಾಗಿ ಮಾರ್ಪಡಿಸಲು ಉಸ್ತಾದ್ರ ಶ್ರಮ ಪ್ರಶಂಸನೀಯ. 11 ವರ್ಷಗಳ ಸೇವಾ ಅವಧಿಯಲ್ಲಿ ವಿದ್ಯಾರ್ಥಿಗಳಿಗೆ ‘ದೀನೀ ಕ್ಲಾಸ್’ ನಡೆಸಿಕೊಂಡು ಬಂದು ನೂರಾರು ಜನರಿಗೆ ದಾರಿದೀಪವಾಗಿದ್ದಾರೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಾಜಿ ಸದರ್ ಉಸ್ತಾದ್ ಎಸ್.ಡಿ. ಅಬೂಬಕ್ಕರ್ ಮುಸ್ಲಿಯಾರ್, ಫಯಾಝ್, ನಿಸಾರ್ ಮತ್ತು ಕಾರ್ಯದರ್ಶಿ ಹಾಜಿ ಉಮರ್ ಬೆಂಗ್ರೆ ಮಾತನಾಡಿದರು. ಒಎಸ್ಎಫ್ ಸಂಘಟನೆಯ ಅಧ್ಯಕ್ಷ ಶೇಖ್ ನಿಸಾರ್ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯಿಂದ ಉಸ್ತಾದರಿಗೆ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಿ ಬೀಳ್ಕೊಡಲಾಯಿತು.
ಸಂಘಟನೆಯ ಗೌರವಾಧ್ಯಕ್ಷ ಬಿ.ಎಂ. ಹನೀಫ್, ಸಂಘಟನೆಯ ಸ್ಥಾಪಕಾಧ್ಯಕ್ಷ ಕಬೀರ್ ಅಹ್ಮದ್ ಉಪಸ್ಥಿತರಿದ್ದರು. ಕಾರ್ಯದರ್ಶಿ ಹಾಜಿ ಉಮರ್ ಬೆಂಗ್ರೆ ಸ್ವಾಗತಿಸಿ, ವಂದಿಸಿದರು.