ಸಿಬಿಎಸ್ಸಿ: ಲಿಟ್ಲ್ರಾಕ್ಗೆ ಶೇ.100 ಫಲಿತಾಂಶ
ವಾಸುದೇವ ಕಿಣಿ ಟಿ., ಪ್ರೀತೀಶ್ವರ್ ಟಿ.
ಬ್ರಹ್ಮಾವರ, ಮೇ 2: ಇಂದು ಪ್ರಕಟಗೊಂಡ 12ನೇ ತರಗತಿಯ ಸಿಬಿಎಸ್ಸಿ ಪರೀಕ್ಷಾ ಫಲಿತಾಂಶದಲ್ಲಿ ಬ್ರಹ್ಮಾವರದ ಲಿಟ್ಲ್ರಾಕ್ ಇಂಡಿಯನ್ ಸ್ಕೂಲ್ ಶೇ.100 ಸಾಧನೆ ಮಾಡಿದೆ. ಕಳೆದ ದಶಕಗಳಿಂದ ವಿದ್ಯಾಸಂಸ್ಥೆಯಲ್ಲಿ ನಡೆದು ಬಂದ ಸಂಪ್ರದಾಯದಂತೆ ಕಾಲೇಜಿನಿಂದ ಪರೀಕ್ಷೆ ಬರೆದ ಎಲ್ಲಾ 106 ಮಂದಿ ವಿದ್ಯಾರ್ಥಿಗಳೂ ತೇರ್ಗಡೆಗೊಂಡಿದ್ದಾರೆ ಎಂದು ಸಂಸ್ಥೆಯ ನಿರ್ದೇಶಕ ಮಾಥ್ಯೂ ಸಿ.ನೈನಾನ್ ಪ್ರಕಟಣೆಯಲ್ಲಿ ತಿಳಿಸಿದೆ.
ಪಿಸಿಎಂಬಿ ಕಾಂಬಿನೇಷನ್ನಲ್ಲಿ ಶೇ.97.4 ಅಂಕಗಳನ್ನು ಪಡೆದ ವಾಸುದೇವ ಕಿಣಿ ಟಿ. ಟಾಪ್ ಸ್ಕೋರರ್ ಆದರೆ, ಸಿಪಿಎಂಸಿಯಲ್ಲಿ ಶೇ.96.4 ಅಂಕಗಳನ್ನು ಪಡೆದ ಪ್ರೀತೀಶ್ವರ್ ಟಿ. ಅಗ್ರಸ್ಥಾನಿಯಾಗಿದ್ದಾರೆ. ಒಟ್ಟು 12 ವಿದ್ಯಾರ್ಥಿಗಳು ಎಲ್ಲಾ ವಿಷಯಗಳಲ್ಲೂ ಎ1 ಮಾರ್ಕ್ ಪಡೆದಿದ್ದಾರೆ.
40 ವಿದ್ಯಾರ್ಥಿಗಳು ಶೇ.90ಕ್ಕಿಂತ ಅಧಿಕ ಅಂಕ ಗಳಿಸಿದರೆ, 41 ಮಂದಿ ಶೇ.80ರಿಂದ 89.9 ಅಂಕ ಪಡೆದಿದ್ದಾರೆ. 18 ವಿದ್ಯಾರ್ಥಿಗಳು ಶೇ.70-79.9, ಆರು ಮಂದಿ ಶೇ.65ರಿಂದ 69.9 ಅಂಕ ಗಳಿಸಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ.
Next Story