ಆಲಂಗಾರು ಅಬ್ದುಲ್ಲ ಕುಂಞಿ ಹಾಜಿ
ವಿಟ್ಲ, ಮೇ 3: ಇಲ್ಲಿಗೆ ಸಮೀಪದ ಉಕ್ಕುಡ ಆಲಂಗಾರು ನಿವಾಸಿ ಪ್ರಗತಿಪರ ಕೃಷಿಕರೂ, ಸಂಘಟಕರಾದ ಅಬ್ದುಲ್ಲ ಕುಂಞಿ ಹಾಜಿ (57) ಅಲ್ಪಕಾಲದ ಅಸೌಖ್ಯದಿಂದ ಶುಕ್ರವಾರ ಬೆಳಗ್ಗೆ ಸ್ವಗೃಹದಲ್ಲಿ ನಿಧನರಾದರು.
ಅವರು ಉಕ್ಕುಡ ಬದ್ರಿಯಾ ಜುಮಾ ಮಸೀದಿ ಹಾಗೂ ಉಕ್ಕುಡ ಪಬ್ಲಿಕ್ ಸ್ಕೂಲ್ ಇದರ ಪದಾಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು. ಉಕ್ಕುಡ ಶಾಲೆಯಲ್ಲಿ ಬಿಸಿಯೂಟ ಆರಂಭಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.
ಮೃತರು ಪತ್ನಿ, ಇಬ್ಬರು ಪುತ್ರರು, ಇಬ್ಬರು ಪುತ್ರಿಯರ ಸಹಿತ ಬಂಧುಮಿತ್ರರನ್ನು ಅಗಲಿದ್ದಾರೆ.
Next Story