ಹಾಜಿ ಅಬ್ದುಲ್ ಕುಂಞಿ ಆಲಂಗಾರು ನಿಧನ
ವಿಟ್ಲ: ಆಲಂಗಾರು ನಿವಾಸಿ ಹಾಜಿ ಅಬ್ದುಲ್ ಕುಂಞಿ (58) ಅಲ್ಪ ಕಾಲದ ಅನಾರೋಗ್ಯದಿಂದಾಗಿ ಇಂದು ಮುಂಜಾನೆ ಸ್ವಗೃಹದಲ್ಲಿ ನಿಧನರಾದರು.
ಉಕ್ಕುಡ ಬದ್ರಿಯಾ ಜುಮಾ ಮಸೀದಿಯ ಮಾಜಿ ಕಾರ್ಯದರ್ಶಿಯಾಗಿ, ಕುತುಬಿಯತ್ ಹಾಗೂ ಜಲಾಲಿಯ ಕಮಿಟಿಯ ಮಾಜಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಸ್ಥಳೀಯ ಅಂಗನವಾಡಿ ಕೇಂದ್ರ ಕಟ್ಟಡಕ್ಕೆ 10 ಸೆಂಟ್ಸ್ ಜಾಗ ಉಚಿತವಾಗಿ ನೀಡಿರುತ್ತಾರೆ. ಉಕ್ಕುಡ ಪಬ್ಲಿಕ್ ಸ್ಕೂಲ್ ನಲ್ಲಿ ಮಧ್ಯಾಹ್ನದ ಬಿಸಿಯೂಟ ಜಾರಿ ಮಾಡಲು ಮಹತ್ವದ ಪಾತ್ರ ವಹಿಸಿರುವ ಅವರು ಇನ್ನಿತರ ಸ್ಥಳೀಯ ಸಂಘ ಸಂಸ್ಥೆಗಳಲ್ಲಿ ಸಕ್ರಿಯವಾಗಿ ಸೇವೆ ಸಲ್ಲಿಸಿದ್ದಾರೆ.
ಮೃತರು ಪತ್ನಿ, ಇಬ್ಬರು ಪುತ್ರರು ಹಾಗೂ ಇಬ್ಬರು ಪುತ್ರಿಯರು ಸಹಿತ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
Next Story