ಬಸ್ ಪ್ರಯಾಣದಲ್ಲೇ ಹೃದಯಾಘಾತದಿಂದ ಮೃತ್ಯು
ಬ್ರಹ್ಮಾವರ, ಮೇ 3: ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಕೋಟ ಸಮುದಾಯ ಆರೋಗ್ಯ ಕೇಂದ್ರದ ಅಂಬ್ಯುಲೆನ್ಸ್ ಚಾಲಕ ಹೃದಯಾಘಾತದಿಂದ ಮೃತಪಟ್ಟ ಘಟನೆ ಮೇ 2ರಂದು ಬೆಳಗ್ಗೆ ನಡೆದಿದೆ.
ಮೃತರನ್ನು ಕೋಟೇಶ್ವರದ ಹಳವಳ್ಳಿಯ ಕೆ.ದಿನೇಶ್ ಗಾಣಿಗ (56) ಎಂದು ಗುರುತಿಸಲಾಗಿದೆ. ಇವರು ಕಳೆದ ಮೂರು ವರ್ಷಗಳಿಂದ ಕೋಟ ಸಮು ದಾಯ ಆರೋಗ್ಯ ಕೇಂದ್ರದ ಅಂಬ್ಯುಲೆನ್ಸ್ ನಲ್ಲಿ ಚಾಲಕನಾಗಿ ಕೆಲಸ ಮಾಡಿ ಕೊಂಡಿದ್ದು, ಚುನಾವಣಾ ಕರ್ತವ್ಯದ ನಿಮಿತ್ತ ಉಡುಪಿ ಸ್ಟ್ರಾಂಗ್ ರೂಂನಲ್ಲಿ ರಾತ್ರಿ ಪಾಳಿಯಲ್ಲಿ ಅಂಬ್ಯುಲೆನ್ಸ್ ಚಾಲಕನಾಗಿ ಕರ್ತವ್ಯದಲ್ಲಿದ್ದರು.
ಇವರು ಉಡುಪಿಯಿಂದ ಕೊಕ್ಕರ್ಣೆಗೆ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದಾಗ ತೀವ್ರ ವಾಗಿ ಅಸ್ವಸ್ಥಗೊಂಡು ಮೃತಪಟ್ಟಿದ್ದಾರೆ. ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story