ಪ್ರೊ.ಬಿ.ಎಂ.ಇಚ್ಲಂಗೋಡುರವರ ಎರಡು ಕೃತಿಗಳು ಲೋಕಾರ್ಪಣೆ
ಮಂಗಳೂರು, ಮೇ 4: ಪ್ರೊ.ಬಿ.ಎಂ.ಇಚ್ಲಂಗೋಡು ಬರೆದ ‘ಇಸ್ಲಾಮಿನ ಸತ್ಯದರ್ಶನ’ ಮತ್ತು ‘ಸುಖಜೀವನ ಅರಳುವ ದಿನ’ ಎಂಬ ಎರಡು ಕೃತಿಗಳು ಇಂದು ನಗರದ ಪ್ರೆಸ್ಕ್ಲಬ್ನಲ್ಲಿ ಬಿಡುಗಡೆಗೊಂಡಿತು.
‘ಇಸ್ಲಾಮಿನ ಸತ್ಯದರ್ಶನ’ ಕೃತಿಯನ್ನು ಎಡಪದವು ಐಡಿಯಲ್ ಶಿಕ್ಷಣ ಸಂಸ್ಥೆಗಳ ಸಂಸ್ಥಾಪಕ ಮುಹಮ್ಮದ್ ಬ್ಯಾರಿ ಹಾಗೂ ‘ಸುಖಜೀವನ ಅರಳುವ ದಿನ’ ಕೃತಿಯನ್ನು ಹಿರಿಯ ಸಾಹಿತಿ ಡಾ.ವಾಮನ ನಂದಾವರ ಬಿಡುಗಡೆಗೊಳಿಸಿ ಶುಭ ಹಾರೈಸಿದರು.
ಕೃತಿಕರ್ತ ಪ್ರೊ.ಬಿ.ಎಂ.ಇಚ್ಲಂಗೋಡು, ಇಚ್ಲಂಗೋಡು ಪುತ್ರ ಹಾರಿಸ್, ಜೀವನ್ ಉಪಸ್ಥಿತರಿದ್ದರು.
Next Story