ಮಂಗಳೂರು: ರಾಜ್ಯ ಎಸ್ಸೆಸ್ಸೆಫ್ ನಿಂದ ಇಹ್ಸಾನ್ ರಿಹ್ಲಾ ಟೀಮ್ ಗೆ ಬೀಳ್ಗೊಡಿಗೆ
ಮಂಗಳೂರು:ಎಸ್ಸೆಸ್ಸೆಫ್ ರಾಜ್ಯ ಸಮಿತಿಯ ವತಿಯಿಂದ ಉತ್ತರ ಕರ್ನಾಟಕ ರಂಝಾನ್ ಒಂದು ತಿಂಗಳ ದಅವಾಗೆ ಹೋಗುವ ಇಹ್ಸಾನ್ ರಿಹ್ಲಾ ಟೀಮ್ ನ ಬೀಳ್ಗೊಡಿಗೆ ಕಾರ್ಯಕ್ರಮವು ಎಸ್ಸೆಸ್ಸೆಫ್ ರಾಜ್ಯಾಧ್ಯಕ್ಷ ಸಯ್ಯದ್ ಸಿ.ಟಿ.ಎಂ ಉಮ್ಮರ್ ಅಸ್ಸಖಾಫ್ ಅಧ್ಯಕ್ಷತೆಯಲ್ಲಿ ಪಂಪ್ ವೆಲ್ ತಖ್ವಾ ಮಸ್ಜಿದ್ ನಲ್ಲಿ ನಡೆಯಿತು.
ದಅವಾ ಕಾರ್ಯಾಚರಣೆ ಮಾಡುವಾಗ ತ್ಯಾಗ ಮನೋಭಾವದಿಂದ, ಪರರಿಗೆ ಸಹಾಯ ಮಾಡುವ ಉದ್ದೇಶದಿಂದ, ನಿಸ್ವಾರ್ಥದಿಂದ, ತಮ್ಮ ಅನುಭವವನ್ನು ಬಳಸಿ ದಅವಾ ಗೆ ಹೋಗಬೇಕೆಂದು ಎಸ್.ವೈ.ಎಸ್ ರಾಜ್ಯಾಧ್ಯಕ್ಷ ಜಿ.ಎಂ ಮಹಮ್ಮದ್ ಕಾಮಿಲ್ ಸಖಾಫಿ ಉಸ್ತಾದರು ಕಾರ್ಯಕ್ರಮವನ್ನು ಉದ್ಘಾಟಿಸುತ್ತಾ ಹೇಳಿದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ರಾಜ್ಯ ಉಪಾಧ್ಯಕ್ಷ ಹಾಫಿಳ್ ಸುಫ್ಯಾನ್ ಸಖಾಫಿ ಕಾವಲ್ಕಟ್ಟೆ, ಕೋಶಾಧಿಕಾರಿ ರವೂಫ್ ಖಾನ್ ಕುಂದಾಪುರ, ಎಸ್ಸೆಸ್ಸೆಫ್ ದ.ಕ ಜಿಲ್ಲಾಧ್ಯಕ್ಷ ಇಬ್ರಾಹಿಂ ಸಖಾಫಿ ಸೆರ್ಕಳ, ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಇಸ್ಮಾಯಿಲ್ ಮಾಸ್ಟರ್ ಮೊಂಟೆಪದವು, ಎಸ್ಸೆಸ್ಸೆಫ್ ರಾಜ್ಯ ನಾಯಕರಾದ ಮುಸ್ತಫಾ ಮಾಸ್ಟರ್ ಉಳ್ಳಾಲ, ಸಫ್ವಾನ್ ಚಿಕ್ಕಮಗಳೂರು, ಎಸ್ಸೆಸ್ಸೆಫ್ ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರೀಫ್ ನಂದಾವರ, ಎಸ್.ವೈ.ಎಸ್ ನಾಯಕ ಅಬ್ದುಲ್ ರಹ್ಮಾನ್ ಮೊಗರ್ಪಣೆ, ಎಸ್ಸೆಸ್ಸೆಫ್ ದ.ಕ ಜಿಲ್ಲಾ ನಾಯಕರಾದ ಇಬ್ರಾಹಿಂ ಅಹ್ಸನಿ ಮಂಜನಾಡಿ, ನವಾಝ್ ಸಖಾಫಿ ಅಡ್ಯಾರ್ ಪದವು ಮೊದಲಾದವರು ಉಪಸ್ಥಿತರಿದ್ದರು.
ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಮೌಲಾನಾ ಅಶ್ರಫ್ ರಝಾ ಅಂಜದಿ ಸ್ವಾಗತಿಸಿದರು.ರಾಜ್ಯ ಕಾರ್ಯದರ್ಶಿ ಹುಸೈನ್ ಸ ಅದಿ ಹೊಸ್ಮಾರ್ ವಂದಿಸಿದರು.