40 ಸಾವಿರ ರೂ. ಮೌಲ್ಯದ ತಾಮ್ರದ ಕೇಬಲ್ ಕಳವು
ಮಂಗಳೂರು, ಮೇ 4: ನಗರದ ಹೊರವಲಯದ ಡಂಪಿಂಗ್ ಯಾರ್ಡ್ ಒಳಗೆ ನೂತನವಾಗಿ ನಿರ್ಮಾಣವಾಗುತ್ತಿರುವ ಮೇಲ್ಚಾವಣಿ ಕಾಮಗಾರಿ ಸ್ಥಳದಿಂದ ಸುಮಾರು 40 ಸಾವಿರ ರೂ. ಮೌಲ್ಯದ ತಾಮ್ರದ ಕೇಬಲ್ ಕಳವಾಗಿದೆ.
ಸಂದೀಪ್ ಎಂಬವರು ದುರ್ಗಾಪರಮೇಶ್ವರಿ ಇಂಜಿನಿಯರಿಂಗ್ ಸಂಸ್ಥೆಯನ್ನು ನಡೆಸುತ್ತಿದ್ದು, ವೆಲ್ಡಿಂಗ್ ನಡೆಸಲು ಯಂತ್ರ ಮತ್ತು ಅದಕ್ಕೆ ಸಂಬಂಧಿಸಿದ ಕೇಬಲ್‌ಗಳನ್ನು ತಂದು ಕಾಮಗಾರಿ ನಡೆಯುವ ಸ್ಥಳದಲ್ಲಿ ಇಟ್ಟಿದ್ದರು. ಮೇ 3ರಂದು ಬೆಳಗ್ಗೆ 10 ಗಂಟೆಯಿಂದ ಮೇ 4ರಂದು ಬೆಳಗ್ಗೆ 9 ಗಂಟೆಯ ನಡುವೆ ಕಳ್ಳರು ಕದ್ದೊಯ್ದಿದ್ದಾರೆ.
ಈ ಬಗ್ಗೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story