ಅಲ್ ರಹ್ಮಾ ಫೌಂಡೇಶನ್ ಗೆ ಪದಾಧಿಕಾರಿಗಳ ಆಯ್ಕೆ
ಬಂಟ್ವಾಳ, ಮೇ 5: ತಲಪಾಡಿಯ ಬದ್ರಿಯ ಜುಮಾ ಮಸೀದಿಯ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಅಲ್ ರಹ್ಮಾ ಫೌಂಡೇಶನ್ (ಎ.ಆರ್.ಎಫ್)ನ ನೂತನ ಅಧ್ಯಕ್ಷರಾಗಿ ಮುಸ್ತಾಕ್ ಬಿ.ಎಂ. ಆಯ್ಕೆಯಾಗಿದ್ದಾರೆ.
ಸಂಘದ ಕಚೇರಿಯಲ್ಲಿ ಹಿರಿಯರಾದ ಇದಿನಬ್ಬ ಅಧ್ಯಕ್ಷತೆಯಲ್ಲಿ ನಡೆದ ಎ.ಆರ್.ಎಫ್.ನ ಮಹಾಸಭೆಯಲ್ಲಿ ಈ ಆಯ್ಕೆ ಮಾಡಲಾಯಿತು.
ಗೌರವ ಅಧ್ಯಕ್ಷರಾಗಿ ಲತೀಫ್ ಕೆಮ್ಮಾರ, ಉಪಾಧ್ಯಕ್ಷರಾಗಿ ಆಸಿಫ್ ಆರ್.ಕೆ., ಪ್ರಧಾನ ಕಾರ್ಯದರ್ಶಿಯಾಗಿ ಅಶ್ರಫ್ ಬಿ.ಎಂ.ಟಿ., ಜೊತೆ ಕಾರ್ಯದರ್ಶಿಯಾಗಿ ಕಮರುದ್ದೀನ್, ಫಹದ್ ಅನ್ವರ್, ಖಜಾಂಚಿಯಾಗಿ ರಿಯಾಝ್ ಝರಾ, ಲೆಕ್ಕ ಪರಿಶೋಧಕರಾಗಿ ಶಾಹುಲ್ ಹಮೀದ್ ಅವರನ್ನು ಆಯ್ಕೆ ಮಾಡಲಾಯಿತು.
ಲತೀಫ್ ಬಿ.ಸಿ., ನವಾಝ್, ಶಮೀರ್ ದಿಯಾ ಮೋಲ್, ಶಮೀರ್ ಕೆ.ಎಚ್., ನವಾಝ್ ಟಿ., ಸಲಾಂ ಬಿ.ಎಂ.ಟಿ., ಆಬಿದ್ ಅಲಿ, ಸದ್ದಾಂ, ಇರ್ಷಾದ್ ಅವರನ್ನು ಸಮಿತಿ ಸದಸ್ಯರಾಗಿ ಆಯ್ಕೆ ಮಾಡಲಾಯಿತು.
Next Story