ಮಂಗಳೂರು: ಪರ್ದಾ ಉಡುಪುಗಳ ನೂತನ ಮಳಿಗೆ ಲಾ’ಮೊರ್ ಶುಭಾರಂಭ
ಮಂಗಳೂರು, ಮೇ 5: ಬಿಎಂಬಿ ಗ್ರೂಪ್‌ನ ಲಾ’ಮೋರ್ ನೂತನ ಮಳಿಗೆಯು ನಗರದ ಕಂಕನಾಡಿ ಬೆಂದೂರ್‌ವೆಲ್‌ನ ಸುಲ್ತಾನ್ ಜುವೆಲರ್ಸ್ ಸಮೀಪದ ಮಂಗಳೂರು ಗೇಟ್ ಕಟ್ಟಡದ ನೆಲಮಹಡಿಯ 10ನೇ ಮಳಿಗೆಯಲ್ಲಿ ರವಿವಾರ ಶುಭಾರಂಭಗೊಂಡಿತು.
ನೂತನ ಮಳಿಗೆಯನ್ನು ಸಾಗರದ ವಿಜಯ ಬೀಡೀಸ್‌ನ ಅಬ್ದುಲ್ ಖಾದರ್ ಉದ್ಘಾಟಿಸಿ, ಶುಭ ಹಾರೈಸಿದರು. ಮುಹಮ್ಮದ್ ಬಶೀರ್ ದಾರಿಮಿ ದುಆಗೈದರು.
ಲಾ’ಮೊರ್ ಮಳಿಗೆ ಮಾಲಕ ಶೌಕತ್ ಅಲಿ ಮಾತನಾಡಿ, ನೂತನ ಮಳಿಗೆಯಲ್ಲಿ ಅಬಯ ಮತ್ತು ಶೇಲಾ ಸಿದ್ಧ ಉಡುಪುಗಳು, ಟರ್ಕಿ ಶೇಲಾ, ವಿದ್ಯಾರ್ಥಿಗಳ ಅಬಯ, ನಿಕಾಬ್, ಹಿಜಾಬ್, ಮಕ್ಕಾನಿ, ಅಬಯ ಶಾಂಪೂ ಸೇರಿದಂತೆ ಎಲ್ಲ ನಮೂನೆಯ ಪರ್ದಾ ಸಂಬಂಧಿತ ಉಡುಪುಗಳು ಲಭ್ಯವಿವೆ. ಜತೆಗೆ ಎಲ್ಲ ವಿಧದ ಅಬಯ ಮತ್ತು ಶೇಲಾಗಳ ಹೊಲಿಗೆ ಆರ್ಡರ್‌ಗಳನ್ನು ಸ್ವೀಕರಿಸಲಾಗುವುದು ಎಂದು ಹೇಳಿದರು.
ವಿಶೇಷ ರಿಯಾಯಿತಿ: ಮಳಿಗೆ ಶುಭಾರಂಭಗೊಂಡ ಹಿನ್ನೆಲೆಯಲ್ಲಿ ಇಂದಿನಿಂದ ಒಂದು ವಾರದವರೆಗೆ ನಮ್ಮಲ್ಲಿ ಖರೀದಿಸುವ ಪರ್ದಾ ಸಂಬಂಧಿತ ಉಡುಪುಗಳ ಮೇಲೆ ಶೇ.15ರಿಂದ 20ರಷ್ಟು ವಿಶೇಷ ರಿಯಾಯಿತಿ ನೀಡಲಾಗುವುದು ಎಂದು ಶೌಕತ್ ಅಲಿ ತಿಳಿಸಿದರು.
ಈ ಸಂದರ್ಭದಲ್ಲಿ ಅಬ್ದುಲ್ ಖಾದರ್ ಪತ್ನಿ ಫಾತಿಮಾ, ಲಾ’ಮೊರ್ ಮಳಿಗೆ ಮಾಲಕ ಶೌಕತ್ ಅಲಿಯವರ ತಾಯಿ ಹವ್ವಮ್ಮ, ಸಹೋದರರಾದ ನಝೀರ್, ಹಾರಿಸ್, ಸಲೀಂ, ಝಮೀರ್ ಮತ್ತಿತರರು ಉಪಸ್ಥಿತರಿದ್ದರು.