ಉತ್ತಮ ವೈದ್ಯರಾಗಲು ಕರ್ತವ್ಯಪರತೆ ಮುಖ್ಯ: ಡಾ.ಶಾಂತಾರಾಮ್
ಮಣಿಪಾಲ, ಮೇ 5: ಉತ್ತಮ ವೈದ್ಯರಾಗಲು ಶಿಸ್ತು, ಕರ್ತವ್ಯಪರತೆ, ಗುರಿ ತುಂಬಾ ಮುಖ್ಯವಾಗಿದೆ ಎಂದು ನಿಟ್ಟೆ ವಿಶ್ವವಿದ್ಯಾಲಯದ ಸಹ ಕುಲಪತಿ ಡಾ. ಎಂ.ಶಾಂತಾರಾಮ ಶೆಟ್ಟಿ ಹೇಳಿದ್ದಾರೆ.
ಮಣಿಪಾಲದ ಮುನಿಯಾಲು ಆಯುರ್ವೇದ ಕಾಲೇಜಿನ ವಾರ್ಷಿಕೋತ್ಸವ ಹಾಗೂ ಪದವಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಶನಿವಾರ ಮಾತನಾಡುತಿದ್ದರು.
ಸಂಸ್ಥೆಯ ಪ್ರಧಾನ ನಿರ್ದೇಶಕ ಡಾ.ಎಂ.ವಿ.ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಾಂಶುಪಾಲ ಡಾ.ಸತ್ಯನಾರಾಯಣ ಭಟ್ ಸಂಸ್ಥೆಯ ವಾರ್ಷಿಕ ಪ್ರಗತಿಯನ್ನು ವಾಚಿಸಿದರು. ಸಂಸ್ಥೆಯ ನಿರ್ದೇಶಕಿ ಹೇಮಲತಾ ಶೆಟ್ಟಿ, ಡಾ.ಶ್ರದ್ಧಾ ಶೆಟ್ಟಿ, ಚಿರಂಜಿತ್ ಅಜಿಲ ಉಪಸ್ಥಿತರಿದ್ದರು. ಡಾ.ಅರ್ಚನಾ ಕಲ್ಲುರಾಯ ಸ್ವಾಗತಿಸಿ ದರು. ಡಾ.ಗುರುರಾಜ ತಂತ್ರಿ ವಂದಿಸಿದರು. ಡಾ.ಮೇಘ ಉದಯ್ ಕಾರ್ಯ ಕ್ರಮ ನಿರೂಪಿಸಿದರು.
ವಿದ್ಯಾರ್ಥಿ ಸಂಘದ ಉದ್ಘಾಟನೆಯನ್ನು ಮಣಿಪಾಲ ಐಸಿಎಎಸ್ನ ನಿರ್ದೇಶಕ ಪ್ರೊ.ಡಾ.ರಾಧಾಕೃಷ್ಣ ಎಸ್.ಐತಾಳ್ ನೆರವೇರಿಸಿದರು. ನಂತರ ಸಾಂಸ್ಕೃತಿಕ ಮತ್ತು ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹು ಮಾನ ಮತ್ತು ಪ್ರಶಸ್ತಿ ಪತ್ರಗಳನ್ನು ವಿತರಿಸಲಾಯಿತು.