ಗ್ರಾಮೀಣ ಪ್ರದೇಶಕ್ಕೂ ಹರಿದ ಕನ್ನಡದ ಕಂಪು: ನೀಲಾವರ ಸುರೇಂದ್ರ ಅಡಿಗ
ಕಾಪು, ಮೇ 5: ಶತಮಾನೋತ್ತರ ಇತಿಹಾಸ ಹೊಂದಿರುವ ಕನ್ನಡ ಸಾಹಿತ್ಯ ಪರಿಷತ್ ಜಾಗತಿಕವಾಗಿ 3ಲಕ್ಷ 20ಸಾವಿರಕ್ಕೂ ಅಧಿಕ ಸದಸ್ಯರನ್ನು ಹೊಂದಿದೆ. ಕನ್ನಡ ನಾಡು, ನುಡಿ, ಸಂಸ್ಕೃತಿ ಜನಪದದ ರಕ್ಷಕನಾಗಿ ಹಲವಾರು ಸಮ್ಮೇಳನ ಗಳನ್ನು ನಡೆಸಿ, ಕೇಂದ್ರಮಟ್ಟದಿಂದ ಗ್ರಾಮೀಣ ಪ್ರದೇಶದವರೆಗೂ ವಿಸ್ತಾರ ಗೊಂಡು ಕನ್ನಡದ ಕಾರ್ಯವನ್ನು ನಡೆಸುತ್ತಿದೆ ಎಂದು ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಹೇಳಿದ್ದಾರೆ.
ಕಾಪು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಆಶ್ರಯದಲ್ಲಿ ಕಾಪು ರೋಟರಿ ಶತಾಬ್ದಿ ಭವನದಲ್ಲಿ ರವಿವಾರ ಆಯೋಜಿಸಲಾದ ಕನ್ನಡ ಸಾಹಿತ್ಯ ಪರಿಷತ್ 105ನೇ ಸಂಸ್ಥಾಪನಾ ದಿನಾಚರಣೆ ಸಮಾರಭವನ್ನು ಉದ್ಘಾಟಿಸಿ ಅವರು ಮಾತ ನಾಡುತಿದ್ದರು.
ಈ ಸಂದಭರ್ದಲ್ಲಿ ಹಿರಿಯ ಸಾಹಿತಿ ಮಮ್ತಾಜ್ ಬೇಗಂ ಬರೆದ ಉಳ್ಳಾಲದ ರಾಣಿ ಅಬ್ಬಕ್ಕರ ಜೀವನಾಧಾರಿತ ‘ಸ್ವಾತಂತ್ರ್ಯದ ಕಹಳೆ’ ಕಾದಂಬರಿ ಯನ್ನು ಬಿಡುಗಡೆಗೊಳಿಸಿದ ಹಿರಿಯ ಸಾಹಿತಿ ಚಂದ್ರಕಲಾ ನಂದಾವರ ಮಾತ ನಾಡಿ, ನಮ್ಮನ್ನು ಒಡೆದು ಆಳುವ ನೀತಿಯನ್ನು ಅನುಸರಿಸಿ ಕೋಮು ಸಾಮರಸ್ಯ ವನ್ನು ನಾಶ ಪಡಿಸಿದ ಪೋರ್ಚುಗೀಸರ ದಬ್ಬಾಳಿಕೆ ಆಕ್ರಮಣಕಾರಿ ನೀತಿಯನ್ನು ದಿಟ್ಟವಾಗಿ ಎದುರಿಸಿ, ನಾಡಿನ ರಕ್ಷಣೆಗಾಗಿ ಹೋರಾಡಿದ ದಿಟ್ಟ ಮಹಿಳೆ ರಾಣಿ ಅಬ್ಬಕ್ಕ. ಈ ಕಾದಂಬರಿ ವಿವಿಧ ಭಾಷೆಗಳಿಗೆ ಅನುವಾ ಆಗ ಬೇಕಾಗಿದೆ ಎಂದು ಹೇಳಿದರು.
ಕೃತಿ ಪರಿಚಯ ಮಾಡಿದ ಮಂಗಳೂರು ವಿಶ್ವವಿದ್ಯಾನಿಲಯದ ಶ್ರೀನಾರಾ ಯಣಗುರು ಅಧ್ಯಯನ ಪೀಠದ ನಿರ್ದೇಶಕ ಮುದ್ದು ಮೂಡುಬೆಳ್ಳೆ ಮಾತನಾಡಿ, ಅಬ್ಬಕ್ಕನ ಸರಳತೆ, ಮಾತೃವಾತ್ಸಲ್ಯ, ಮುಗ್ದತೆ ಪೋರ್ಚುಗೀಸರ ವಿರುದ್ಧ ಸಾಮ, ದಾನ, ಬೇದ, ದಂಡ ಎಲ್ಲವನ್ನೂ ಪ್ರಯೋಗಿಸಿ ಗೆದ್ದ ಮಹಿಳೆಯ ಶೌರ್ಯದ ಬಗ್ಗೆ ಹೆಮ್ಮೆ ಪಡುವಂತಿದೆ. ಇತಿಹಾಸಕ್ಕೆ ಹತ್ತಿರ ಇರುವಂತೆ ರಚನೆಗೊಂಡ ಕಾಂದಂಬರಿ ಉತ್ತಮವಾಗಿ ಮೂಡಿಬಂದಿದೆ ಎಂದರು.
ಸಾಹಿತಿ ಮಮ್ತಾಜ್ ಮಾತನಾಡಿದರು. ಅಧ್ಯಕ್ಷತೆನ್ನು ಕಾಪು ತಾಲೂಕು ಕಸಾಪ ಅಧ್ಯಕ್ಷ ಬಿ.ಪುಂಡಲೀಕ ಮರಾಠೆ ವಹಿಸಿದ್ದರು. ಕಸಾಪ ಜಿಲ್ಲಾ ಗೌರವ ಕಾರ್ಯ ದರ್ಶಿ ಸುಬ್ರಹ್ಮಣ್ಯ ಶೆಟ್ಟಿ, ಗೌರವ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆರೂರು ತಿಮ್ಮಪ್ಪಶೆಟ್ಟಿ ಉಪಸ್ಥಿತರಿದ್ದರು.
ತಾಲೂಕು ಗೌರವ ಕಾರ್ಯದರ್ಶಿ ವಿದ್ಯಾಧರ್ ಪುರಾಣಿಕ್ ಸ್ವಾಗತಿಸಿದರು. ಗೌರವ ಕಾರ್ಯದರ್ಶಿ ಅಮ್ಮಣ್ಣಾಯ ಕಾರ್ಯಕ್ರಮ ನಿರೂಪಿಸಿದರು. ತಾಲೂಕು ಸಮಿತಿ ಸದಸ್ಯ ಹರೀಶ್ಚಂದ್ರ ಕಟಪಾಡಿ ವಂದಿಸಿದರು.