ಮಾಡೂರು: ರಮಝಾನ್ ಕಿಟ್ ವಿತರಣೆ
ದೇರಳಕಟ್ಟೆ, ಮೇ 5: ರಮಝಾನ್ ತಿಂಗಳಲ್ಲಿ ಕಿಟ್ ವಿತರಣೆಯಂತಹ ಕಾರ್ಯಕ್ರಮವನ್ನು ಮಾಡೂರು ಗಲ್ಫ್ ಫ್ರೆಂಡ್ಸ್ ಹಮ್ಮ್ಮಿಕೊಂಡಿರುವುದು ಸ್ವಾಗತಾರ್ಹ. ಇದರಿಂದ ಬಹಳಷ್ಟು ಕುಟುಂಬಗಳಿಗೆ ಸಹಕಾರಿಯಾಗಲಿದೆ. ಇಂತಹ ಕಾರ್ಯ ಇನ್ನು ಕೂಡಾ ಯಶಸ್ವಿಯಾಗಲಿ ನಡೆಯಲಿ ಎಂದು ಮಾಡೂರು ಇಮಾಮುದ್ದೀನ್ ಜುಮಾ ಮಸೀದಿಯ ಖತೀಬ್ ಬಶೀರ್ ಅಹ್ಸನಿ ತೋಡಾರು ಹೇಳಿದರು.
ಮಾಡೂರು ಜುಮಾ ಮಸೀದಿ ಬಳಿ ಮಾಡೂರು ಗಲ್ಫ್ ಫ್ರೆಂಡ್ಸ್ ಆಶ್ರಯದಲ್ಲಿ ರವಿವಾರ ನಡೆದ ಕಿಟ್ ವಿತರಣಾ ಕಾರ್ಯಕ್ರಮದಲ್ಲಿ ದುಆಗೈದು ಮಾತನಾಡಿದರು.
ಕೋಟೆಕಾರ್ ಪ.ಪಂ.ಕೌನ್ಸಿಲರ್ ಹಮೀದ್ ಹಸನ್ ಮಾಡೂರು, ಮಾಡೂರು ಗಲ್ಫ್ ಫ್ರೆಂಡ್ಸ್ನ ಅಧ್ಯಕ್ಷ ಎಂ.ಎ. ಶಾಕೀರ್, ಉಪಾಧ್ಯಕ್ಷ ಹಫೀಝ್, ಮಾಡೂರು ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಮಜೀದ್, ಅಬ್ದುಲ್ ರಹ್ಮಾನ್, ಅರಬ್ಬಿ ಹಾಜಿ, ಹಝ್ರತ್ ಕ್ವಾರಿ ಇರ್ಫಾನ್, ಎಂ.ಎ. ಬಶೀರ್, ಹಸೈನಾರ್ ಬಾಪಕುಂಞಿ, ಶೇಖ್ ಅನ್ವರ್, ನಝೀರ್ ಮಾಡೂರು ಉಪಸ್ಥಿತರಿದ್ದರು.
Next Story