ಮಲಾರ್ ಹೆಲ್ಪ್ಲೈನ್ಗೆ ಪದಾಧಿಕಾರಿಗಳ ಆಯ್ಕೆ
ರಿಝ್ವಾನ್ ಅರಸ್ತಾನ
ಮಂಗಳೂರು, ಮೇ 5: ಪಾವೂರು ಗ್ರಾಮದ ‘ಮಲಾರ್ ಹೆಲ್ಪ್ಲೈನ್’ನ ಪ್ರಥಮ ವಾರ್ಷಿಕೋತ್ಸವವು ಇತ್ತೀಚೆಗೆ ಅಧ್ಯಕ್ಷ ಕಬೀರ್ ಮಲಾರ್ರ ಅಧ್ಯಕ್ಷತೆಯಲ್ಲಿ ಜರುಗಿ 2019-20ನೆ ಸಾಲಿಗೆ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಹಾರಿಸ್ ಮಲಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಅಧ್ಯಕ್ಷರಾಗಿ ರಿಝ್ವಾನ್ ಅರಸ್ತಾನ, ಸಂಚಾಲಕರಾಗಿ ಎಂ.ಕೆ. ಸಮದ್, ಉಪಾಧ್ಯಕ್ಷರಾಗಿ ಕಬೀರ್ ಕೆರೆಬಳಿ, ಪ್ರಧಾನ ಕಾರ್ಯದರ್ಶಿಯಾಗಿ ಶಮೀರ್ ಟಿಪ್ಪುನಗರ, ಕಾರ್ಯದರ್ಶಿಯಾಗಿ ಸಮದ್ ಜಿ, ಕೋಶಾಧಿಕಾರಿಯಾಗಿ ಎಂ.ಕೆ.ಇಮ್ರಾನ್, ವಿಶೇಷ ಸದಸ್ಯರಾಗಿ ತಸ್ಲೀಂ ಮಲಾರ್, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಅರ್ಷದ್ ಅರಸ್ತಾನ, ಹನೀಫ್ ಅರಸ್ತಾನ, ಎಂ.ಪಿ.ಆಸೀಫ್ ಟಿಪ್ಪುನಗರ, ಆರ್. ಹಂಝ ಮಲಾರ್, ಅನೀಷ್ ನಡುಗುಡ್ಡೆ ಆಯ್ಕೆಯಾದರು.
Next Story