ತುಂಬೆ ಮೊಹಿದ್ದೀನ್ ಜುಮಾ ಮಸೀದಿ: ಪದಾಧಿಕಾರಿಗಳ ಆಯ್ಕೆ
ಇಮ್ತಿಯಾಝ್
ಫರಂಗಿಪೇಟೆ, ಮೇ.5: ಮೊಹಿದ್ದೀನ್ ಜುಮಾ ಮಸೀದಿ ತುಂಬೆ ಇದರ ವಾರ್ಷಿಕ ಮಹಾಸಭೆ ಇತ್ತೀಚೆಗೆ ನಡೆಯಿತು. ಸಭೆಯಲ್ಲಿ ಮಸೀದಿ ಆಡಳಿತ ಸಮಿತಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಯಿತು.
ಗೌರವಾಧ್ಯಕ್ಷರಾಗಿ ಡಾ. ಬಿ ಅಹ್ಮದ್ ಹಾಜಿ ಮೊಹಿದ್ದೀನ್, ಅಧ್ಯಕ್ಷರಾಗಿ ಇಮ್ತಿಯಾಝ್ ಅಲ್ಫಾ, ಪ್ರಧಾನ ಕಾರ್ಯದರ್ಶಿಯಾಗಿ ಟಿಎಮ್ ಮೂಸಬ್ಬ , ಉಪಾಧ್ಯಕ್ಷರಾಗಿ ಟಿ ಅಬ್ದುಲ್ ಅಝೀಝ್, ಜೊತೆ ಕಾರ್ಯದರ್ಶಿಯಾಗಿ ಅಬ್ದುಲ್ ರಶೀದ್, ಕೋಶಾಧಿಕಾರಿಯಾಗಿ ಮೊಹಮ್ಮದ್ ಶೆರೀಫ್ ಟಿಕೆ, ಲೆಕ್ಕ ಪರಿಶೋಧಕರಾಗಿ ಮೊಹಮ್ಮದ್ ಇರ್ಫಾನ್, ಸದಸ್ಯರಾಗಿ ಝಹೂರ್, ಅಬ್ದುಲ್ ರಹ್ಮಾನ್ ಅದ್ದಾದಿ, ಲತೀಫ್ ಹಿಮಾಮಿ, ಅಬೂಬಕ್ಕರ್ ಹಾಜಿ, ಅಬ್ದುಲ್ ಅಝೀಝ್, ಇಸಾಕ್, ಆಶಿಫ್, ಹನೀಫ್ ಉಜಿರೆ ಪಳ್ಳ, ನವಾಝ್ ಹುದವಿಯವರನ್ನು ಆಯ್ಕೆ ಮಾಡಲಾಯಿತು.
2018-19ನೇ ಸಾಲಿನ ವಾರ್ಷಿಕ ಮಹಾಸಭೆಯ ಸಭಾ ಅಧ್ಯಕ್ಷತೆಯನ್ನು ನಿಕಟ ಪೂರ್ವ ಅಧ್ಯಕ್ಷ ಅಬ್ದುಲ್ ರಹ್ಮಾನ್ ಅದ್ದಾದಿ ವಹಿಸಿದರು, ಪ್ರಧಾನ ಕಾರ್ಯದರ್ಶಿ ಟಿಎಮ್ ಮೂಸಬ್ಬ ವಾರ್ಷಿಕ ವರದಿ ಮಂಡಿಸಿದರು
Next Story