ಉಳ್ಳಾಲ: ವಿಹಾರೆಕ್ಕೆಂದು ಬಂದ ವ್ಯಕ್ತಿ ಸಮುದ್ರ ಪಾಲು
ಉಳ್ಳಾಲ: ಉಳ್ಳಾಲ ಮೊಗವೀರ ಪಟ್ಣ ಬಳಿ ಸಮುದ್ರ ವಿಹಾರಕ್ಕೆಂದು ಸ್ನೇಹಿತನ ಜತೆಗೆ ಬಂದಿದ್ದ ವ್ಯಕ್ತಿಯೋರ್ವ ಸಮುದ್ರ ಪಾಲಾಗಿರುವ ಘಟನೆ ರವಿವಾರ ಸಂಜೆ ವೇಳೆ ಸಂಭವಿಸಿದೆ.
ಬೆಂಗಳೂರು ಶಿವಾಜಿನಗರ ನಿವಾಸಿ ರಿಝ್ವಾನ್ (45) ಸಮುದ್ರದಲ್ಲಿ ಮುಳುಗಿ ನಾಪತ್ತೆಯಾದವರು.
ಗೆಳೆಯನ ಜತೆಗೆ ಉಳ್ಳಾಲ ಮೊಗವೀರಪಟ್ನ ಸಮುದ್ರ ತೀರಕ್ಕೆ ವಿಹಾರಕ್ಕೆಂದು ಬಂದಿದ್ದರು. ಸಮುದ್ರದ ಅಲೆಗಳ ಜತೆಗೆ ಆಟವಾಡುತ್ತಿದ್ದಂತೆ ಅಪ್ಪಳಿಸಿದ ಅಲೆಗೆ ರಿಝ್ವಾನ್ ಸಮುದ್ರ ಪಾಲಾಗಿದ್ದಾರೆ . ಗೆಳೆಯ ಜತೆಗಿದ್ದು, ಅಲೆಗಳ ಅಬ್ಬರಕ್ಕೆ ರಿಝ್ವಾನ್ ಅವರನ್ನು ರಕ್ಷಿಸಲು ಅವರಿಗೂ ಅಸಾಧ್ಯವಾಗಿತ್ತು ಎಂದು ತಿಳಿದುಬಂದಿದೆ.
ಈ ಬಗ್ಗೆ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story