ಇಲೆಕ್ಟ್ರಾನಿಕ್ ರಿಪೇರಿ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಅಗ್ನಿ ಅವಘಡ
ಮಂಗಳೂರು: ಇಲೆಕ್ಟ್ರಾನಿಕ್ ರಿಪೇರಿ ಅಂಗಡಿಯಲ್ಲಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಅವಘಡ ಸಂಭವಿಸಿದ ಘಟನೆ ಬಿಜೈನಲ್ಲಿ ನಡೆದಿದೆ.
ಬಿಜೈ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿಯ ಭವಾನಿ ಕಾಂಪ್ಲೆಕ್ಸ್ ನ ತಳ ಅಂತಸ್ತಿನ ಇಲೆಕ್ಟ್ರಾನಿಕ್ ರಿಪೇರಿ ಅಂಗಡಿಯಲ್ಲಿ ಈ ಘಟನೆ ನಡೆದಿದೆ. ಇಲೆಕ್ಟ್ರಾನಿಕ್ ಅಂಗಡಿಯಲ್ಲಿ ರಿಪೇರಿಗಾಗಿ ಬಂದಿದ್ದ ಹಲವು ಸಾಮಗ್ರಿಗಳು ಬೆಂಕಿ ಅವಘಡಕ್ಕೆ ಹಾನಿಯಾಗಿದೆ. ಕದ್ರಿ ಅಗ್ನಿಶಾಮಕದಳದ ಸಿಬ್ಬಂದಿ ಬೆಂಕಿ ನಂದಿಸಿದರು
Next Story