ಸಂತೆಕಟ್ಟೆ: ಕುಟುಂಬ ಸಮ್ಮಿಲನ
ಉಡುಪಿ, ಮೇ 6: ನಿಸರ್ಗ ಟೌನ್ ಶಿಪ್ ಸಂತೆಕಟ್ಟೆ ಇದರ ವಾರ್ಷಿಕ ಕುಟುಂಬ ಸಮ್ಮಿಲನ ಕಾರ್ಯಕ್ರಮ ಇತ್ತೀಚೆಗೆ ಟೌನ್‌ಶಿಪ್‌ನ ಪ್ರಸ್ತುತ ಸಾಲಿನ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ನರ್ನಾಡು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಎಂಜಿಎಂ ಕಾಲೇಜಿನ ಪ್ರಾಧ್ಯಾಪಕ ಕೊಕ್ಕರ್ಣೆ ಸುರೇಂದ್ರನಾಥ್ ಶೆಟ್ಟಿ ಹಾಗೂ ಖ್ಯಾತ ಪರಿಸರ ತಜ್ಞ ಹಾಗೂ ಸಮಾಜ ಸೇವಕ ಜೋಸೆಫ್ ಜಿ.ಎಂ.ರೆಬೆಲ್ಲೋ ಭಾಗವಹಿಸಿದ್ದರು.
ಕಾರ್ಯದರ್ಶಿ ದಾಮೋದರ್ ಭಟ್ ವಾರ್ಷಿಕ ವರದಿ ಮಂಡಿಸಿದರು. ಖಜಾಂಚಿ ವರದರಾಜ್ ಕೆ.ಬಿ. ವೇದಿಕೆಯಲ್ಲಿ ಉಪಸ್ಥಿತರಿದ್ದರು. ಸವಿತಾ ಶೆಟ್ಟಿಗಾರ್ ಮತ್ತು ವೃಂದಾ ವರದರಾಜ್ ಕಾರ್ಯಕ್ರಮ ನಿರ್ವಹಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಟೌನ್‌ಶಿಪ್ ಸದಸ್ಯರಿಂದ ಮನೋರಂಜನಾ ಕಾರ್ಯಕ್ರಮ ನಡೆಯಿತು.
Next Story