ಗುರುಪುರ ನದಿ ದಂಡೆಯಲ್ಲಿ ಮೃತದೇಹ ಪತ್ತೆ
ಮಂಗಳೂರು, ಮೇ 6: ಕುಳೂರು ಗುರುಪುರ ನದಿಯ ದಂಡೆಯಲ್ಲಿ ಸುಮಾರು 45 ವರ್ಷದ ವ್ಯಕ್ತಿಯ ಮೃತದೇಹ ಪತ್ತೆಯಾಗಿದೆ.
ಈತ ಒಂದೆರಡು ದಿನದ ಹಿಂದೆ ನೀರಿಗೆ ಹಾರಿ ಆತ್ಮಹತ್ಯೆ ಮಾಡಿರಬಹುದು ಎಂದು ಶಂಕೆ ವ್ಯಕ್ತಪಡಿಸಲಾಗಿದೆ.
ಚಹರೆ: 5.5 ಅಡಿ ಎತ್ತರ, ದೃಢಕಾಯ ಶರೀರ, ಕಪ್ಪು ತಲೆ ಕೂದಲು, ಗಡ್ಡ ಮೀಸೆಯಿದೆ. ಮೃತರು ಬಿಳಿ ಬಣ್ಣದ ಉದ್ದ ತೋಳಿ ಶರ್ಟ್, ಕಪ್ಪು ಬಣ್ಣದ ಪ್ಯಾಂಟ್ ಧರಿಸಿದ್ದಾರೆ.
ಈ ಕುರಿತು ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತರ ವಾರಸುದಾರರಿದ್ದಲ್ಲಿ ನಗರ ಕಂಟ್ರೋಲ್ ರೂಂ ಅಥವಾ ಕಾವೂರು ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುದೆಂದು ಪ್ರಕಟನೆ ತಿಳಿಸಿದೆ.
Next Story