ಉಳ್ಳಾಲ: ಶೈಖುನಾ ಬಾವ ಉಸ್ತಾದ್ ನಿಧನ
ಉಳ್ಳಾಲ: ಸೈಯದ್ ಮದನಿ ಅರಬಿಕ್ ಕಾಲೇಜ್ ನಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ಶೈಖುನಾ ಬಾವ ಉಸ್ತಾದ್ ಅವರು ಸೋಮವಾರ ರಾತ್ರಿ ನಿಧನರಾದರು.
ಅವರಿಗೆ 81 ವರ್ಷ ಪ್ರಾಯವಾಗಿತ್ತು.
ಮೂಲತಃ ಉಳ್ಳಾಲ ನಿವಾಸಿ, ದೇವಬಂದ್ ನಿಂದ ಎಂಎಫ್ ಬಿ (ಬಾಖವಿ) ಪದವಿ ಪಡೆದಿದ್ದ ಅವರು ಉಪ್ಪಿನಂಗಡಿ, ಕನ್ನಂಗಾರ್, ಉರುವಾಲು ಪದವು ಮತ್ತಿತರ ಕಡೆ ಮುದರ್ರಿಸ್ ಆಗಿ ಸೇವೆ ಸಲ್ಲಿಸಿದ್ದರು.
ಮೃತದೇಹವನ್ನು 10:30ಕ್ಕೆ ಉಳ್ಳಾಲ ದರ್ಗಾ ವಠಾರದಲ್ಲಿ ಸಂದರ್ಶನಕ್ಕೆ ಇಡಲಾಗುವುದು. ದ.ಕ ಜಿಲ್ಲಾ ಸಂಯುಕ್ತ ಖಾಝಿ ಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ಅವರ ನೇತೃತ್ವದಲ್ಲಿ ಉಳ್ಳಾಲ ದರ್ಗಾ ವಠಾರದಲ್ಲಿ ಮಯ್ಯತ್ ನಮಾಝ್ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.
Next Story