ಐಸಿಎಸ್ಇ ಪರೀಕ್ಷೆ: ಭಟ್ಕಳ ತಾಲೂಕಿಗೆ ಶೇ.100 ಫಲಿತಾಂಶ
ವಿನುತಾ
ಭಟ್ಕಳ: ಫೆಬ್ರವರಿ ತಿಂಗಳಲ್ಲಿ ಜರಗಿದ ಐಸಿಎಸ್ಇ ಹತ್ತನೇ ತರಗತಿ ಪರೀಕ್ಷೆ ಫಲಿತಾಂಶ ಮಂಗಳವಾರ ಸಂಜೆ ಪ್ರಕಟಗೊಂಡಿದ್ದು ಭಟ್ಕಳ ತಾಲೂಕು ಶೇ.100 ಫಲಿತಾಂಶ ದಾಖಲಿಸಿದೆ.
ಭಟ್ಕಳದ ಸಾಗರ ರಸ್ತೆಯಲ್ಲಿರುವ ವಿದ್ಯಾಂಜಲಿ ಪಬ್ಲಿಕ್ ಸ್ಕೂಲ್ ಕಳೆದ 5 ವರ್ಷಗಳಿಂದ ಶೇ.100 ಫಲಿತಾಂಶ ದಾಖಲಿಸುತ್ತ ಬಂದಿದೆ. ಈ ಬಾರಿಯ ಪರೀಕ್ಷೆಯಲ್ಲಿಯೂ ಶೇ.100 ಫಲಿತಾಂಶ ಬಂದಿದ್ದು ವಿನುತಾ ಭಟ್ 96.33% ಅಂಕಗಳನ್ನು ಗಳಿಸಿ ತಾಲೂಕಿಗೆ ಪ್ರಥಮ ಸ್ಥಾನ ಪಡೆದಿದ್ದಾಳೆ ಹಾಗೂ ನೀರಜ್ ನಾಯಕ್ 91.66%, ರೋಹಿತ್ ಮಹಾಲೆ 91.16% ಅಂಕಗಳನ್ನು ಪಡೆದು ಶಾಲೆಯ ಕೀರ್ತಿಯನ್ನು ಹೆಚ್ಚಿಸಿದ್ದಾರೆ.
ಕಳೆದ 3 ವರ್ಷಗಳಿಂದ ಶೇ.100 ಫಲಿತಾಂಶ ದಾಖಲಿಸುತ್ತ ಬಂದಿರುವ ಜಾಮಿಯಾಬಾದ್ ರಸ್ತೆಯ ನ್ಯೂ ಶಮ್ಸ್ ಸ್ಕೂಲ್ ಶಾಲೆಯು ಈ ಬಾರಿಯೂ ಶೇ.100 ಫಲಿತಾಂಶ ದಾಖಲಿಸಿದೆ. ಈ ಶಾಲೆಯ ರಾಬಿಯಾ ಮಲಿಹಾ ಶೇ.96.5 ಅಂಕಗಳನ್ನು ಪಡೆಯುವುದರ ಮೂಲಕ ತಾಲೂಕಿಗೆ ದ್ವಿತೀಯಾ ಸ್ಥಾನವನ್ನು ಪಡೆದುಕೊಂಡಿದ್ದಾಳೆ.
ಮುರುಡೇಶ್ವರದ ಬೀನಾ ವೈದ್ಯ ಶಾಲೆಯು ಮೊದಲ ಬಾರಿಗೆ ಪರೀಕ್ಷೆಯನ್ನು ಎದುರಿಸಿದ್ದು ಶೇ.100 ಫಲಿತಾಂಶವನ್ನು ದಾಖಲಿಸಿದೆ. ಈ ಶಾಲೆಯ ಸುದೀಪ್ ವೆಂಕಟೇಶ್ ನಾಯ್ಕ ಶೇ.93.8 ಅಂಕ ಪಡೆಯುವುದರ ಮೂಲಕ ತಾಲೂಕಿಗೆ ತೃತೀಯ ಸ್ಥಾನವನ್ನು ಪಡೆದುಕೊಂಡಿದ್ದಾನೆ.