ಮಣಿಪಾಲ: ಜಿಪಂ ಕಚೇರಿ ನೌಕರರ ಪರ್ಸ್ ಕಳವು
ಮಣಿಪಾಲ, ಮೇ 7: ಮಣಿಪಾಲ ರಜತಾದ್ರಿಯಲ್ಲಿರುವ ಜಿಪಂ ಕಚೇರಿಯ ಮಹಿಳಾ ನೌಕರರೊಬ್ಬರ ನಗದು ಸಹಿತ ಪರ್ಸ್ ಕಳವಾಗಿರುವ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಜಿಪಂ ಡಿ ಗ್ರೂಪ್ ನೌಕರರಾದ ಗುಲಾಬಿ (55) ಎಂಬವರು ಮೇ 6ರಂದು ಕರ್ತವ್ಯ ನಿರ್ವಹಿಸುತ್ತಿರುವಾಗ ಪ್ರತಿ ದಿನ ಇಡುವ ಸ್ಥಳದಲ್ಲಿ ತನ್ನ ವ್ಯಾನಿಟಿ ಬ್ಯಾಗ್ ಇಟ್ಟಿದ್ದು ಅದರಲ್ಲಿದ್ದ 3 ಸಾವಿರ ರೂ. ನಗದು ಸಹಿತ ಪರ್ಸನ್ನು ಬೆಳಿಗ್ಗೆ 10:45 ಗಂಟೆ ಸುಮಾರಿಗೆ ಅಪರಿಚಿತ ವ್ಯಕ್ತಿಗಳು ಕಳವು ಮಾಡಿಕೊಂಡು ಹೋಗಿರುವ ಬಗ್ಗೆ ಸಿಸಿ ಕ್ಯಾಮರಾ ದೃಶ್ಯಾವಳಿಯಲ್ಲಿ ಕಂಡು ಬಂದಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Next Story