ಎಸ್ಎಸ್ಎಲ್ಸಿ ಟಾಪರ್ ಸಿಂಚನಾ ಲಕ್ಷ್ಮಿಗೆ ಕ್ಯಾಂಪಸ್ ಫ್ರಂಟ್ನಿಂದ ಸನ್ಮಾನ
ಪುತ್ತೂರು: ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ 624 ಅಂಕಗಳನ್ನು ಪಡೆದು ರಾಜ್ಯಮಟ್ಟದಲ್ಲಿ ದ್ವಿತೀಯ ಸ್ಥಾನ ಪಡೆದ ವಿವೇಕಾನಂದ ವಿದ್ಯಾಸಂಸ್ಥೆಯ ವಿದ್ಯಾರ್ಥಿನಿ ಸಿಂಚನಾಲಕ್ಷ್ಮಿ ಅವರನ್ನು ಅವರ ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಕೊಡಂಕಿರಿಯಲ್ಲಿರುವ ನಿವಾಸದಲ್ಲಿ ಕ್ಯಾಂಪಸ್ ಫ್ರಂಟ್ ಆಪ್ ಇಂಡಿಯಾ ಸಂಘಟನೆಯ ಪುತ್ತೂರು ತಾಲೂಕು ಸಮಿತಿಯವರು ಸನ್ಮಾನಿಸಿದರು.
ಸಿಂಚನಾಲಕ್ಷ್ಮಿ ಅವರನ್ನು ಅವರ ತಂದೆ ಮುರಳೀಧರ್ ಭಟ್ ಹಾಗೂ ತಾಯಿ ಶೋಭಾ ಎಂ.ಬಿ ಅವರ ಉಪಸ್ಥಿತಿಯಲ್ಲಿ ಸನ್ಮಾನಿಸಿ ಗೌರವಿಸಿದ ಸಂಘಟನೆಯ ಮುಖಂಡರು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಕ್ಯಾಂಪಸ್ ಫ್ರಂಟ್ ರಾಷ್ಟ್ರೀಯ ಸಮಿತಿಯ ಸದಸ್ಯೆ ಮಿಸ್ರಿಯಾ ಪುತ್ತೂರು, ಪುತ್ತೂರು ತಾಲೂಕು ಸಮಿತಿಯ ಸದಸ್ಯರಾದ ಇರ್ಶಾನ, ನಾಸಿರಾ ಮತ್ತಿತರರು ಉಪಸ್ಥಿತರಿದ್ದರು.
Next Story