ಮೇ 19: ತೀಸ್ತಾ ಸೆಡಲ್ವಾಡ್ ಪುಸ್ತಕ ಲೋಕಾರ್ಪಣೆ
ಮಂಗಳೂರು, ಮೇ 8: ಖ್ಯಾತ ಮಾನವಹಕ್ಕು ಹೋರಾಟಗಾರ್ತಿ ತೀಸ್ತಾ ಸೆತಲ್ವಾಡ್ ಅವರ ಅನುಭವ ಕಥನಗಳನ್ನು ಒಳಗೊಂಡ ಪುಸ್ತಕವನ್ನು ಪತ್ರಕರ್ತೆ ಸತ್ಯಾ ಎಸ್. ಕನ್ನಡಕ್ಕೆ ‘ಸಂವಿಧಾನದ ಕಾಲಾಳು ಕೆಲವು ನೆನಹುಗಳು’ ಎಂಬುದಾಗಿ ಅನುವಾದಿಸಿದ್ದು, ಬೆಂಗಳೂರಿನ ಕ್ರಿಯಾ ಮಾಧ್ಯಮ ಪ್ರಕಾಶನ ಪ್ರಕಟಿಸಿದೆ. ಈ ಪುಸ್ತಕದ ಲೋಕಾರ್ಪಣೆಯು ಮೇ 19ರಂದು ಬೆಳಗ್ಗೆ ಸಂತ ಅಲೋಶಿಯಸ್ ಕಾಲೇಜಿನ ಬಾವುಟಗುಡ್ಡೆ ಸಭಾಂಗಣದಲ್ಲಿ ನಡೆಯಲಿದೆ.
ಈ ಸಂದರ್ಭ ನಡೆಯಲಿರುವ ವಿಚಾರ ಸಂಕಿರಣದಲ್ಲಿ ತೀಸ್ತಾ ಸೆತಲ್ವಾಡ್‌ಭಾಗವಹಿಸಲಿದ್ದಾರೆ. ಕ್ರಿಯಾ ಮಾಧ್ಯಮ ಪ್ರಕಾಶನ ಆಯೋಜಿಸಿರುವ ಈ ಕಾರ್ಯಕ್ರಮವನ್ನು ಮಂಗಳೂರಿನ ಸಮುದಾಯ ಸಾಂಸ್ಕೃತಿಕ ಸಂಘಟನೆ ಮತ್ತು ಸಂತ ಅಲೋಶಿಯಸ್ ಕಾಲೇಜು ಪ್ರಾಯೋಜಿಸಿರುತ್ತದೆ ಎಂದು ಸಮುದಾಯ ಸಂಘಟನೆಯ ವಾಸುದೇವ ಉಚ್ಚಿಲ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
Next Story