ಮೇ 10 ರಂದು ಅಜೆಕಾರಿನಲ್ಲಿ ಅಂಗನವಾಡಿ ಉತ್ಸವ
ಹೆಬ್ರಿ, ಮೇ 8:ಅಜೆಕಾರು ಶ್ರೀರಾಮಮಂದಿರದಲ್ಲಿ ಮೇ 10 ರಂದು ಸಂಜೆ 4:30ಕ್ಕೆ ನಡೆಯುವ ಕುರ್ಸುಕಟ್ಟೆ ಅಂಗನವಾಡಿ ಉತ್ಸವವನ್ನು ಮೂಡುಬಿದಿರೆ ತುಳು ಕೂಟದ ಅಧ್ಯಕ್ಷ ಎಂ.ಚಂದ್ರಹಾಸ ದೇವಾಡಿಗ ಉದ್ಘಾಟಿಸಲಿದ್ದಾರೆ.
ಇದರಲ್ಲಿ ಮಜಾಭಾರತ ಖ್ಯಾತಿಯ ಆರಾಧನಾ ಭಟ್ ನಿಡ್ಡೋಡಿ, ಸರಿ ಗಮಪ ಲಿಟ್ಲ್ ಚಾಂಪ್ ಕ್ಷಿತಿ ರೈ ಧರ್ಮಸ್ಥಳ, ಡ್ರಾಮಾ ಜೂನಿಯರ್ ವಿಜೇತೆ ಸೃಷ್ಟಿ ಶೆಟ್ಟಿ, ಚೋಟಾ ವಾಗ್ಮಿ ಪ್ರದ್ಯಮ್ನ ಮೂರ್ತಿ ಸಹಿತ ಅನೇಕ ಪ್ರತಿಭಾನ್ವಿತ ಮಕ್ಕಳು ಕಾರ್ಯಕ್ರಮ ನೀಡಲಿರುವರು.
ರಾಜ್ಯಮಟ್ಟದಲ್ಲಿ ಅತ್ಯುತ್ತಮ ಶಾಲೆಯಾಗಿ ಗುರುತಿಸಲ್ಪಟ್ಟಿರುವ ಪೇರಿ ಅಂಗನವಾಡಿ ಮಕ್ಕಳು ವಿಶೇಷ ಆಹ್ವಾನಿತ ತಂಡವಾಗಿ ಆಗಮಿಸುತ್ತಿದ್ದಾರೆ ಎಂದು ಶಿಕ್ಷಕಿ ಶಕುಂತಳ ಮತ್ತು ಸಹಾಯಕಿ ಥೆರಾ ತಾವ್ರೊ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story