ಬದ್ರಿಯಾ ಜುಮ್ಮಾ ಮಸೀದಿ ಪದಾಧಿಕಾರಿಗಳ ಆಯ್ಕೆ
ಬ್ರಹ್ಮಾವರ, ಮೇ 8: ಭದ್ರಗಿರಿ ಬದ್ರಿಯಾ ಜುಮ್ಮಾ ಮಸೀದಿಯ ದ್ವೈ ವಾರ್ಷಿಕ ಮಹಾಸಭೆ ಹಾಗು 2019-20ನೆ ಸಾಲಿನ ಪದಾಧಿಕಾರಿಗಳ ಆಯ್ಕೆ ಇತ್ತೀಚೆಗೆ ಮದ್ರಸ ಹಾಲ್ನಲ್ಲಿ ಜರಗಿತು.
ಬಿ.ಮೊದಿನ್ ಪುತ್ತಬ್ಬ ಬ್ಯಾರಿ ಅಧ್ಯಕ್ಷತೆಯಲ್ಲಿ ಮಸೀದಿ ಖತೀಬ್ ಶಾಫಿ ಮದನಿ ದುವಾ ನೆರವೇರಿಸಿದರು. ಗೌರವಧ್ಯಕ್ಷರಾಗಿ ಅಬೂಬಕರ್ ಸಾಹೇಬ್, ಅಧ್ಯಕ್ಷರಾಗಿ ಮೊದಿನ್ ಬ್ಯಾರಿ, ಉಪಾಧ್ಯಕ್ಷರಾಗಿ ಹಾಜಿ ಇಸ್ಮಾಯಿಲ್ ಸಾಹೇಬ್, ಕಾರ್ಯದರ್ಶಿಯಾಗಿ ಅನ್ವರ್ ಬಾಷಾ, ಜೊತೆ ಕಾರ್ಯದರ್ಶಿ ಯಾಗಿ ಬಿ.ಮೊದಿನ್ ಪುತ್ತಬ್ಬ ಬ್ಯಾರಿ, ಸದಸ್ಯರುಗಳಾಗಿ ಸುಲೈಮಾನ್, ಹಸನ್ ಸಾಹೇಬ್, ಅಬ್ದುಲ್ ರಝಾಕ್, ಜಾಕಿರ್ ಹುಸೇನ್, ಮಹಮ್ಮದ್ ಆಸೀಫ್ ಇವರನ್ನು ಆರಿಸಲಾಯಿತು.
Next Story