ಮೇ 9ರಂದು ಬೇಸಿಗೆ ಶಿಬಿರದ ಸಮಾರೋಪ
ಉಡುಪಿ, ಮೇ 8: ಜಿಲ್ಲಾ ಬಾಲಭವನದ ಬಯಲು ರಂಗಮಂಟಪದಲ್ಲಿ ಮೇ 9ರಂದು ಬೇಸಿಗೆ ಶಿಬಿರದ ಸಮಾರೋಪ ಸಮಾರಂಭ ಮತ್ತು ಮಕ್ಕಳ ನಾಟಕೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
10ರಂದು ಬೆಳಗ್ಗೆ 10ಕ್ಕೆ ಮಣಿಪಾಲ ಬಸ್‌ನಿಲ್ದಾಣದಲ್ಲಿ ಬೀದಿ ನಾಟಕ, 11ಕ್ಕೆ ಉಡುಪಿ ಸಿಟಿ ಬಸ್‌ನಿಲ್ದಾಣದಲ್ಲಿ ಬೀದಿ ನಾಟಕ, ಅಪರಾಹ್ನ 12ಕ್ಕೆ ಬನ್ನಂಜೆ ತಾಲೂಕು ಕಚೇರಿ ಎದುರು ಬೀದಿ ನಾಟಕ, 3:30ರಿಂದ 4ರವರೆಗೆ ಬ್ರಹ್ಮಗಿರಿ ಬಾಲಭವನದ ಬಯಲು ರಂಗಮಂದಿರದಲ್ಲಿ ಹೊಯ್ಸಳ ಕೆಳದಿ ಚೆನ್ನಮ್ಮ ಪ್ರಶಸ್ತಿ ಯೋಜನೆಯಡಿ ಅಸಾಧಾರಣ ಸಾಧನೆ ಮಾಡಿದ ಮಕ್ಕಳಿಗೆ ಜಿಲ್ಲಾ ಮಟ್ಟದ ಪ್ರಶಸ್ತಿ, ಸಂಜೆ 4ಕ್ಕೆ ಅಭಿರಂಗ ಮಕ್ಕಳ ನಾಟಕೋತ್ಸವ ಕಾರ್ಯಕ್ರಮ ನಡೆಯಲಿದೆ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story