ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಮಝಾನ್ ವೃತ ಆಚರಣೆ
ಮೂಡುಬಿದಿರೆ: ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ರಮಝಾನ್ ಮೊದಲ ದಿನದ ಆಚಣೆಯನ್ನು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅಗಮಿಸಿದ ಉದ್ಯಮಿ ಅಬುಲಾಲ್ ಪುತ್ತಿಗೆ ಆಳ್ವಾಸ್ ಕಾಲೇಜಿನಲ್ಲಿ ಸರ್ವ ಧರ್ಮವನ್ನು ಗೌರವಿಸುವ ಸಂಸ್ಥೆ ಅದ್ದರಿಂದ ಇಲ್ಲಿನ ವಿದ್ಯಾರ್ಥಿಗಳು ಪುಣ್ಯವಂತರು. ನಾವೆಲ್ಲರು ಸಮಾಜದಲ್ಲಿ ಬೆರೆತು ಬಾಳುವುದರ ಜೊತೆಗೆ ಸಮಾಜದ ಉನ್ನತಿಗೆ ಶ್ರಮಿಸಬೇಕು. ಎಲ್ಲರನ್ನು ಗೌರವಿಸಿ, ಎಲ್ಲ ಧರ್ಮವನ್ನು ಗೌರವಿಸುವ ಪ್ರಜೆಗಳಾಬೇಕೆಂದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಮ್ಯಾನೆಜಿಂಗ್ ಟ್ರಸ್ಟಿ ವಿವೇಕ್ ಆಳ್ವ, ಉದ್ಯಮಿ ಮುಸ್ತಾಪ, ಇಂಜಿನಿಯರ್ ಮುಹಮ್ಮದ್ ಶರೀಫ್, ಸಿ.ಎಚ್. ಅಬ್ದುಲ್ ಗಫೂರ್, ಉಪನ್ಯಾಸಕ ಮುಹಮ್ಮದ್ ರಫಿ ಉಪಸ್ಥಿತರಿದ್ದರು.
Next Story