ಪುತ್ತಿಗೆಶ್ರೀ ಶಿಷ್ಯ ಸ್ವೀಕಾರ ವಿರುದ್ಧ ಉಡುಪಿ ಕೋರ್ಟ್ನಲ್ಲಿ ದಾವೆ
ಫೈಲ್ ಚಿತ್ರ
ಉಡುಪಿ, ಮೇ 8: ಪುತ್ತಿಗೆ ಮಠದ ಶ್ರೀಸುಗುಣೇಂದ್ರ ತೀರ್ಥ ಸ್ವಾಮೀಜಿ ಅವರು ಎ. 22ರಂದು ತಮ್ಮ ಉತ್ತರಾಧಿಕಾರಿಯಾಗಿ ಪ್ರಶಾಂತ ಆಚಾರ್ಯರಿಗೆ ಸನ್ಯಾಸ ದೀಕ್ಷೆ ನೀಡಿರುವುದರ ವಿರುದ್ಧ ಉಡುಪಿ ಜಿಲ್ಲಾ ನ್ಯಾಯಾಲಯದಲ್ಲಿ ಪೇಜಾವರ ಮಠದ ಪರಿತ್ಯಕ್ತ ಯತಿ ವಿಶ್ವವಿಜಯ ಅವರು ದಾವೆ ಹೂಡಿದ್ದಾರೆ.
ಅಷ್ಟಮಠದ ಯತಿಗಳಿಗೆ ನಿಷಿದ್ಧವಾದ ವಿದೇಶಯಾನ ಮಾಡಿದ್ದರಿಂದ ಪುತ್ತಿಗೆ ಸ್ವಾಮೀಜಿಯವರಿಗೆ ಸನ್ಯಾಸ ದೀಕ್ಷೆ ಕೊಡುವ ಅಧಿಕಾರ ಇಲ್ಲ. ಅಮೆರಿಕಾಕ್ಕೆ ತೆರಳಿದ ಕಾರಣಕ್ಕೆ ತನ್ನನ್ನು ಪೀಠದಿಂದ ಬಲಾತ್ಕಾರವಾಗಿ ಕೆಳಗಿಸಲಾಗಿತ್ತು. ಆದರೆ ಈಗ ಇಂಜಿನಿಯರಿಂಗ್ ಕಲಿತ ಪ್ರಶಾಂತ ಆಚಾರ್ಯ ಅವರಿಗೆ ಸನ್ಯಾಸ ದೀಕ್ಷೆ ನೀಡಿದ್ದು ನಿಯಮಬಾಹಿರ. ವೇದ, ವೇದಾಂತ, ತರ್ಕ, ವ್ಯಾಕರಣ, ಸಂಸ್ಕೃತ ಅಧ್ಯಯನ ಮಾಡದಿದ್ದವರಿಗೆ ಉತ್ತರಾಧಿಕಾರಿಯಾಗುವ ಅರ್ಹತೆ ಇಲ್ಲ. ಹೀಗಾಗಿ ಅವರನ್ನು ಅನರ್ಹಗೊಳಸೇಕು ಎಂದು ವಿಶ್ವವಿಜಯ ವಾದಿಸಿದ್ದಾರೆ.
ವಿಶ್ವವಿಜಯ ಅವರು ತಮ್ಮ ದಾವೆಯಲ್ಲಿ ಪುತ್ತಿಗೆ ಶ್ರೀಗಳು, ಪ್ರಶಾಂತ್ ಆಚಾರ್ಯ, ಪರ್ಯಾಯ ಪಲಿಮಾರು ಶ್ರೀ, ಪೇಜಾವರ ಶ್ರೀ, ಕೃಷ್ಣಾಪುರ ಶ್ರೀ, ಕಾಣಿಯೂರು ಶ್ರೀ, ಸೋದೆ ಶ್ರೀ, ಅದಮಾರು ಶ್ರೀಗಳನ್ನು ಪ್ರತಿವಾದಿಗಳು ಎಂದು ಉಲ್ಲೇಖಿಸಿದ್ದಾರೆ.