ಮದುವೆ ನಿಶ್ಚಯವಾಗಿದ್ದ ಯುವತಿ ನಾಪತ್ತೆ
ಪಡುಬಿದ್ರಿ, ಮೇ 8: ಮದುವೆ ನಿಶ್ಚಯವಾಗಿದ್ದ ಹಾವೇರಿ ಮೂಲದ ಪಡುಬಿದ್ರಿಯ ಕಲ್ಲಟ್ಟೆ ನಿವಾಸಿ ಗುಡ್ಡಪ್ಪ ಸುಣಗಾರ್ ಎಂಬವರ ಮಗಳು ಪ್ರೀತಿ (19) ಎಂಬಾಕೆ ಮೇ 7ರಂದು ನಾಪತ್ತೆಯಾಗಿದ್ದಾರೆ.
ಪಿಯುಸಿ ವ್ಯಾಸಂಗ ಮುಗಿಸಿ ಟೈಲರಿಂಗ್ ಕಲಿಯಲು ಹೋಗುತ್ತಿದ್ದ ಈಕೆಗೆ ಗದಗ ಜಿಲ್ಲೆಯ ದಿನೇಶ್ ಎಂಬುವರೊಂದಿಗೆ ಮದುವೆ ನಿಶ್ಚಯವಾಗಿತ್ತು. ಮೇ 7ರಂದು ಸಂಜೆ ಬ್ಯೂಟಿ ಪಾರ್ಲರ್ ಗೆ ಹೋಗಿ ಬರುವುದಾಗಿ ಮನೆಯಿಂದ ಹೋದವಳು ಈವರೆಗೆ ವಾಪಾಸು ಬಾರದೆ ನಾಪತ್ತೆಯಾಗಿದ್ದಾಳೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story