ಮಣಿಪಾಲ: ಶಂಕಿತ ಎಚ್1ಎನ್1ಗೆ ಪತ್ರಕರ್ತೆ ಬಲಿ
ಮಣಿಪಾಲ, ಮೇ 8: ಶಂಕಿತ ಎಚ್1ಎನ್1ಗೆ ಪತ್ರಕರ್ತೆಯೋರ್ವರು ಬಲಿಯಾದ ಘಟನೆ ಮಣಿಪಾಲದ ಕೆಎಂಸಿ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ 8:30ರ ಸುಮಾರಿಗೆ ನಡೆದಿದೆ.
ಮೃತರನ್ನು ಸಾಸ್ತಾನ ಗುಂಡ್ಮಿ ನಿವಾಸಿ ಅರ್ಚನಾ (26) ಎಂದು ಗುರುತಿಸಲಾಗಿದೆ.
ಜ್ವರದ ಹಿನ್ನೆಲೆಯಲ್ಲಿ 15 ದಿನಗಳ ಹಿಂದೆ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ರಾತ್ರಿ ಅವರು ಕೊನೆಯುಸಿರೆಳೆದಿದ್ದಾರೆ.
ಐದು ತಿಂಗಳ ಹಿಂದೆ ವಿವಾಹಿತರಾಗಿದ್ದ ಅರ್ಚನಾ ಮೂರು ತಿಂಗಳ ಗರ್ಭಿಣಿಯಾಗಿದ್ದರು. ಇವರು ಸ್ಥಳೀಯ ಖಾಸಗಿ ಚಾನೆಲ್‌ವೊಂದರಲ್ಲಿ ಪತ್ರಕರ್ತೆಯಾಗಿ ದುಡಿಯುತ್ತಿದ್ದರು.
ಅರ್ಚನಾರ ಸಾವಿಗೆ ಆಸ್ಪತ್ರೆಯ ವೈದ್ಯರ ನಿರ್ಲಕ್ಷವೇ ಕಾರಣ ಎಂದು ಆರೋಪಿಸಿ ಮೃತರ ಕುಟುಂಬಸ್ಥರು ಬುಧವಾರ ರಾತ್ರಿ ಆಸ್ಪತ್ರೆಯ ಎದುರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ಯಪಡಿಸಿದ ಘಟನೆಯೂ ನಡೆಯಿತು.
Next Story