ಕೋಡಿಜಾಲ್: ರಮಝಾನ್ ಕಿಟ್ ವಿತರಣೆ
ಕೊಣಾಜೆ, ಮೇ 9: ಕೋಡಿಜಾಲ್ ನ ಖಿದ್ಮತುಲ್ ಇಸ್ಲಾಂ ಅಸೋಸಿಯೇಶನ್, ಜಿಸಿಸಿ ದಮ್ಮಾಮ್ ಘಟಕ ಹಾಗೂ ಜಮೀಯ್ಯತುಲ್ ಫಲಾಹ್ ಮಂಗಳೂರು ಇದರ ವತಿಯಿಂದ ಅರ್ಹ ಕುಟುಂಬಗಳಿಗೆ ರಮಝಾನ್ ಕಿಟ್ ವಿತರಣೆ ಕಾರ್ಯಕ್ರಮ ಕೋಡಿಜಾಲ್ ನ ರಿಫಾಯಿ ಜುಮಾ ಮಸ್ಜಿದ್ ವಠಾರದಲ್ಲಿ ಬುಧವಾರ ರಾತ್ರಿ ಜರುಗಿತು.
ಜಮಾಅತ್ ಅಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್ ನೇತೃತ್ವದಲ್ಲಿ ಸದರ್ ಉಸ್ತಾದ್ ಉಮರ್ ಸಅದಿ ಉಪಸ್ಥಿತಿಯಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಮಸೀದಿಯ ಪ್ರಧಾನ ಕಾರ್ಯದರ್ಶಿ ಹಾಜಿ ಅಬೂಬಕರ್, ಕಾರ್ಯದರ್ಶಿ ಅಬ್ದುರ್ರಹ್ಮಾನ್ ಕೆ.ಎಸ್., ಖಿದ್ಮತುಲ್ ಇಸ್ಲಾಂ ಅಸೋಸಿಯೇಶನ್ನ ಅಧ್ಯಕ್ಷ ಅಮೀರ್ ಕೋಡಿಜಾಲ್, ಗೌರವಾಧ್ಯಕ್ಷ ಅಬ್ದುರ್ರಹ್ಮಾನ್ ಕೆ.ಎಂ., ಉಪಾಧ್ಯಕ್ಷ ಹನೀಫ್ ಬಿ., ಕೋಶಾಧಿಕಾರಿ ಅಶ್ರಫ್, ಖಿದ್ಮತುಲ್ ಇಸ್ಲಾಂ ಅಸೋಸಿಯೇಶನ್ ದಮ್ಮಾಮ್ ಘಟಕದ ಅಧ್ಯಕ್ಷ ಇಮ್ತಿಯಾಝ್ ಕೆ.ಎಂ., ಮಾಜಿ ಅಧ್ಯಕ್ಷ ಸೂಫಿ ಇಬ್ರಾಹೀಂ, ಮಾಜಿ ಕೋಶಾಧಿಕಾರಿ ಅಝರ್, ಮಾಜಿ ಕಾರ್ಯದರ್ಶಿ ಅಝೀಝ್, ಹಿರಿಯರಾದ ಅಬ್ದುಲ್ ಖಾದರ್ ಮುಸ್ಲಿಯಾರ್ ಹಾಗೂ ಮತ್ತಿತರರು ಉಪಸ್ಥಿತರಿದ್ದರು.
Next Story