ಮೆಲ್ಕಾರ್ ಮಹಿಳಾ ಪಪೂ ಕಾಲೇಜು: ಪಿಯು ಸಾಧಕರಿಗೆ ಅಭಿನಂದನೆ ಕಾರ್ಯಕ್ರಮ
ಬಂಟ್ವಾಳ, ಮೇ 9: ದ್ವಿತೀಯ ಪಿಯುಸಿ ವಾರ್ಷಿಕ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿರುವ ಮೆಲ್ಕಾರ್ ಮಹಿಳಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿಗಳಾದ ಅಮೀನತುಲ್ ಆರೀಫ, ಮೈಮುನತುಲ್ ಲುತ್ಫಾ ಹಾಗೂ ನಜೀಬ ಇವರಿಗೆ ಸಂಸ್ಥೆಯ ಅಧ್ಯಕ್ಷ ಎಸ್.ಎಂ ರಶೀದ್ ಹಾಜಿ ನಗದು ಬಹುಮಾನಗಳನ್ನು ನೀಡಿ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಟ್ಯಾಲೆಂಟ್ ರಿಸರ್ಚ್ ಫೌಂಡೇಶನ್ ಸಲಹೆಗಾರ ಮುಹಮ್ಮದ್ ರಫೀಕ್ ಮಾಸ್ಟರ್ ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದರು. ವೇದಿಕೆಯಲ್ಲಿ ಪ್ರಾಂಶುಪಾಲ ಅಬ್ದುಲ್ಲತೀಫ್, ಉಪ ಪ್ರಾಂಶುಪಾಲ ಏಂಜೆಲಿನ್ ಸುನೀತಾ ಪಿರೇರ, ಉಪನ್ಯಾಸಕರಾದ ಅಬ್ದುಲ್ ಮಜೀದ್ ಎಸ್. ಉಪಸ್ಥಿತರಿದ್ದರು.
ವಿದ್ಯಾರ್ಥಿನಿ ಫಾತಿಮಾ ಝಿಯಾ ಕಿರಾಅತ್ ಪಠಿಸಿದರು. ಅಶುರಾ ಸ್ವಾಗತಿಸಿದರು. ಜೈನಬಾ ಆಮನಿಯ ವಂದಿಸಿದರು. ಮೈಮನತುಲ್ ಲುತ್ಫಾ ಕಾರ್ಯಕ್ರಮ ನಿರೂಪಿಸಿದರು.
Next Story