ಸಿಪಿಎಲ್ನಲ್ಲಿ ಈ ಬಾರಿ ಮಹಿಳಾ ಕ್ರಿಕೆಟಿಗರ ಆಕರ್ಷಣೆ
ಮಂಗಳೂರು, ಮೇ 9: ಕೋಸ್ಟಲ್ವುಡ್ ಕಲಾವಿದರು ಮತ್ತು ತಂತ್ರಜ್ಞರ ತಂಡದ ಆಶ್ರಯದಲ್ಲಿ ನಡೆಯಲಿರುವ ಸಿಪಿಎಲ್ ಕ್ರಿಕೆಟ್ ಪಂದ್ಯಾಟದಲ್ಲಿ ಈ ಬಾರಿ ಮಹಿಳಾ ಕ್ರಿಕೆಟಿಗರ ಎರಡು ತಂಡಗಳು ಪ್ರಮೋಶನಲ್ ಪಂದ್ಯವನ್ನು ಆಡುವ ಮೂಲಕ ಗಮನ ಸೆಳೆಯಲಿವೆ.
ಮೇ 10ರಿಂದ 12ರವರೆಗೆ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನ ಮೈದಾನದಲ್ಲಿ ನಡೆಯಲಿರುವ ಕ್ರಿಕೆಟ್ ಪಂದ್ಯಾಟದಲ್ಲಿ ಕೋಸ್ಟಲ್ವುಡ್ ಕ್ವೀನ್ಸ್ ಹಾಗೂ ಲೀಡ್ಸ್ ದಿವಾಸ್ ತಂಡಗಳು ಆಡಲಿವೆ. ಈ ಬಾರಿ ಪ್ರಮೋಶನಲ್ ಆಟವಾಗಿದ್ದು, ಇದಕ್ಕೆ ಯಶಸ್ಸು ದೊರೆತರೆ ಮುಂದಿನಿಂದ ಪಂದ್ಯಾಟಗಳ ಮೂಲಕ ಗಮನ ಸೆಳೆಯಲಿದ್ದೇವೆ ಎಂದು ಕೋಸ್ಡಲ್ವುಡ್ ಕ್ವೀನ್ಸ್ ತಂಡದ ನಾಯಕಿ ರಕ್ಷಿತಾ ರೈ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.
ಸಿಪಿಎಲ್ನ ತಂಡವಾದ ಚಾಲೆಂಜಿಂಗ್ ಸ್ಟಾರ್ಸ್ ಪ್ಲೇಯರ್ಸ್ನ ಜೆರ್ಸಿ ಹಾಗೂ ಪೋಸ್ಟರ್ ಬಿಡುಗಡೆಯನ್ನು ಈ ಸಂದರ್ಭ ನೆರವೇರಿಸಲಾಯಿತು.
ಚಾಲೆಂಜಿಂಗ್ ಸ್ಟಾರ್ಸ್ ಪ್ಲೇಯರ್ಸ್ ಹಾಗೂ ಕೋಸ್ಟಲ್ವುಡ್ ಕ್ವೀನ್ಸ್ ತಂಡಗಳ ಮಾಲಕರಾಗಿರುವ ಸಂದೀಪ್ ಶೆಟ್ಟಿ ಮಾತನಾಡಿ, ತಂಡಗಳು ಈ ಬಾರಿ ಉತ್ತಮ ಪ್ರದರ್ಶನ ನೀಡುವ ಮೂಲಕ ಅಭಿಮಾನಿಗಳ ಮನ ಗೆಲ್ಲಲಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಆಟಗಾರರಾದ ಅದ್ವಿಕಾ, ವಿಶ್ವಾಸ್ ಗುರುಪುರ, ಚೈತ್ರಾ ಉಪಸ್ಥಿತರಿದ್ದರು.